21.6 C
Sullia
Sunday, March 8, 2026

ಕಂಡಕಂಡಲ್ಲಿ ನಾಯಿಗೆ ಬಿಸ್ಕಟ್ ಹಾಕುವಂತಿಲ್ಲ..! ಶ್ವಾನಪ್ರಿಯರೇ ನೀವು ಓದಲೇಬೇಕಾದ ವರದಿ..!

ನ್ಯೂಸ್ ನಾಟೌಟ್ : ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಶ್ವಾನಪ್ರಿಯರು ಹಾಗೂ ಸಾರ್ವಜನಿಕರ ನಡುವಿನ ನಿತ್ಯದ ಜಗಳಕ್ಕೆ ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಠಿಣ ಕ್ರಮಕ್ಕೆ ಮುಂದಾಗಿದೆ. ಇನ್ಮುಂದೆ ನೀವು ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಬಿಸ್ಕೆಟ್ ಅಥವಾ ಊಟ ಹಾಕುವಂತಿಲ್ಲ. ಹಾಗೇನಾದರೂ ಮಾಡಿದರೆ ದಂಡ ತೆರಬೇಕಾಗುತ್ತದೆ! ನಗರದಲ್ಲಿ ಬೀದಿ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಬಿಎ ಈ ಮಹತ್ವದ ನಿರ್ಧಾರ ಕೈಗೊಂಡಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ನಾಯಿಗಳಿಗೆ ಆಹಾರ ನೀಡಲೆಂದೇ ಜಿಬಿಎ ನಗರದಾದ್ಯಂತ 450 ಅಧಿಕೃತ ಕೇಂದ್ರಗಳನ್ನು (Feeding Centers) ಗುರುತಿಸಿದೆ. ಈ ಸ್ಥಳಗಳಲ್ಲಿ ಮಾತ್ರವೇ ಶ್ವಾನಗಳಿಗೆ ಆಹಾರ ನೀಡಬೇಕು. ಈ ಕೇಂದ್ರಗಳನ್ನು ಹೊರತುಪಡಿಸಿ ರಸ್ತೆ ಬದಿ, ಪಾದಚಾರಿ ಮಾರ್ಗ ಅಥವಾ ಸಾರ್ವಜನಿಕರಿಗೆ ತೊಂದರೆಯಾಗುವ ಸ್ಥಳಗಳಲ್ಲಿ ಆಹಾರ ನೀಡಿದರೆ ದಂಡ ಹಾಕುವುದು ಖಚಿತ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಪ್ರಾದೇಶಿಕ ಪ್ರವೃತ್ತಿ ನಾಯಿಗಳು ಸಹಜವಾಗಿ ಪ್ರಾದೇಶಿಕ ಪ್ರವೃತ್ತಿಯನ್ನು ಹೊಂದಿರುತ್ತವೆ. ಒಂದೇ ಕಡೆ ಆಹಾರ ಸಿಗುವುದರಿಂದ ಅವು ಆ ಜಾಗವನ್ನು ತಮ್ಮದೆಂದು ಭಾವಿಸಿ, ಅಲ್ಲಿ ಬರುವ ಅಪರಿಚಿತರ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸಲು ನಿರ್ದಿಷ್ಟ ಜಾಗ ಗುರುತಿಸಲಾಗಿದೆ.

ಆಹಾರ ನೀಡುವವರಿಗೆ ಷರತ್ತುಗಳೇನು?

  • ಜಿಬಿಎ ಗುರುತಿಸಿದ ಅಧಿಕೃತ ಸ್ಥಳಗಳಲ್ಲಿ ‘ಆಹಾರ ಕೇಂದ್ರ’ ಎಂಬ ಫಲಕ ಅಳವಡಿಸಲಾಗುತ್ತದೆ.
  • ಆಹಾರ ನೀಡುವವರು ಆ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕಡ್ಡಾಯ.
  • ಜನದಟ್ಟಣೆ (Crowd) ಕಡಿಮೆ ಇರುವ ಸಮಯದಲ್ಲಿ ಮಾತ್ರ ಆಹಾರ ನೀಡಬೇಕು ಎಂದು ಸೂಚಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Latest Articles