ನ್ಯೂಸ್ ನಾಟೌಟ್: ಹಲವು ಕನಸಗಳೊಂದಿಗೆ ಸುಳ್ಯ ತಾಲೂಕಿನ ಗೂನಡ್ಕದಲ್ಲಿ ಹರಿಪ್ರಸಾದ್ ಕಿರ್ಲಾಯ ಮಾಲೀಕತ್ವದ ಕಿರ್ಲಾಯ ಆರ್ಕೇಡ್ ಶುಭಾರಂಭಗೊಂಡಿದೆ. ತೂಗು ಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಅವರು ಫೆ.14ರಂದು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನಡೆಸಿದರು. ಬಳಿಕ ಮಾತನಾಡಿದ ಗಿರೀಶ್ ಭಾರದ್ವಾಜ್ ಅವರು, ‘ಹರಿಪ್ರಸಾದ್ ಹಾಗೂ ಅವರ ಕುಟುಂಬ ಶ್ರಮದ ಫಲದಿಂದ ಇಂತಹದ್ದೊಂದು ಕನಸನ್ನು ಸಾಕಾರ ಮಾಡಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಪ್ರತಿಯೊಬ್ಬರು ಕನಸು ಕಂಡು ತಮ್ಮ ಕನಸನ್ನು ನನಸು ಮಾಡುವುದರ ಕಡೆಗೆ ಚಿತ್ತವಹಿಸಿ ಶ್ರಮಿಸಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಕೆ.ಆರ್. ಗಂಗಾಧರ್ ಅವರು ಮಾತನಾಡಿ, ‘ಕಿರ್ಲಾಯ ಆರ್ಕೇಡ್ ನಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ರೋಡ್ ಎಷ್ಟೇ ಅಗಲ ಆದರೂ ಕಿರ್ಲಾಯ ಆರ್ಕೇಡ್ ತನ್ನ ಸೊಬಗನ್ನು ಕಳೆದುಕೊಳ್ಳುವುದಿಲ್ಲ. ಬಿಲ್ಡಿಂಗ್ ಕೆಲಸವನ್ನು ಕೂಡ ಅಷ್ಟೇ ಚೆನ್ನಾಗಿ ನಿರ್ವಹಿಸಿದ್ದಾರೆ’ ಎಂದು ತಿಳಿಸಿದರು. ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ , ಮಹಮ್ಮದ್ ಕುಜ್ಇ ಗೂನಡ್ಕ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.














