21.6 C
Sullia
Sunday, March 8, 2026

ಈ ಮಗುವಿನ ಬದುಕಿಗೆ ಬೆಳಕಾಗಿ..ನೆರವಿನ ನಿರೀಕ್ಷೆಯಲ್ಲಿ ಶಿವಾನ್ಶಿ

ನ್ಯೂಸ್ ನಾಟೌಟ್ : ಮಂಗಳೂರಿನ ಐದು ವರ್ಷದ ಬಾಲೆಯೊಂದು ಅನಾರೋಗ್ಯದಿಂದ ಬಳಲುತ್ತಿದ್ದು, ದಾನಿಗಳ ಸಹಾಯ ಯಾಚಿಸುತ್ತಿದೆ. ಮಗುವಿನ ಚಿಕಿತ್ಸೆಗೆ 25ರಿಂದ 30 ಲಕ್ಷ ರೂಪಾಯಿ ವೆಚ್ಚ ತಗುಲಲಿದ್ದು, ಮಗುವಿನ ಪೋಷಕರು ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಮಂಗಳೂರಿನ ಪಡೀಲ್ ನಿವಾಸಿ ರಾಕೇಶ್- ಸುಮಾ ದಂಪತಿಯ 5 ವರ್ಷದ ಬಾಲೆ ಶಿವಾನ್ಶಿ ಅನಾರೋಗ್ಯಕ್ಕೀಡಾಗಿ, ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಡಾ. ಹರ್ಷ ಪ್ರಸಾದ್ ಅವರು ಮಗುವಿಗೆ ಚಿಕಿತ್ಸೆ ನೀಡುತ್ತಿದ್ದು, 25ರಿಂದ 30 ಲಕ್ಷ ವೆಚ್ಚವಾಗಬಹುದು ಎಂದು ತಿಳಿಸಿದ್ದಾರೆ.

ಆದರೆ ದಾನಿಗಳ ನೆರವಿನಿಂದ ಕೇವಲ ಒಂದು ಲಕ್ಷವಷ್ಟೇ ಕೈ ಸೇರಿದೆ. ಇನ್ನೂ ಬಹು ದೊಡ್ಡ ಮೊತ್ತದ ಹಣದ ಅವಶ್ಯಕತೆ ಇರುವುದರಿಂದ ಶಿವಾನ್ಶಿಯ ಕುಟುಂಬ ಕಂಗಾಲಾಗಿದೆ. ಒಂದೆಡೆ ಆಸ್ಪತ್ರೆಗೆ ಅಲೆದಾಟ ಮಗುವಿನ ಆರೈಕೆ ಜೊತೆಗೆ ದಾನಿಗಳ ಬಳಿಗೆ ತೆರಳಿ ಸಹಾಯ ಕೇಳುವ ಪರಿಸ್ಥಿತಿಯಲ್ಲಿ ಕುಟುಂಬ ಇಲ್ಲ. ಹಾಗಾಗಿ ನಿಮ್ಮಿಂದ ಎಷ್ಟು ಸಾಧ್ಯವಾಗುತ್ತದೋ ಶಿವಾನ್ಶಿಯ ಬಾಳಿಗೆ ಬೆಳಕಾಗಬೇಕೆಂದು ಕುಟುಂಬ ಕಣ್ಣೀರಿಟ್ಟು ಸಹಾಯ ಯಾಚಿಸುತ್ತಿದೆ. ದಯವಿಟ್ಟು ನಿಮ್ಮ ಸ್ನೇಹಿತರ ಬಳಗಕ್ಕೆ , ಕುಟುಂಬ ವರ್ಗಕ್ಕೆ, ಬಂಧುಗಳಿಗೆ ಸಹಾಯ ಮಾಡುವಂತೆ ತಿಳಿಸಿ, ಹೆಣ್ಮಗಳ ಜೀವ ಉಳಿಸಲು ನೆರವಾಗಿ ಎಂದು ಶಿವಾನ್ಶಿ ಕುಟುಂಬ ಪ್ರಾರ್ಥಿಸಿದೆ.

ಶಿವಾನ್ಶಿಯ ಚಿಕಿತ್ಸೆಗೆ ನೆರವಾಗುವವರು ಮಗುವಿನ ಪೋಷಕರ ಬ್ಯಾಂಕ್ ಖಾತೆ ಹಣ ವರ್ಗಾವಣೆ ಮಾಡಬಹುದು.

ರಾಕೇಶ್ ಮರೋಳಿ(ಮಗುವಿನ ತಂದೆ): 8546975561

ಸುಮಾ ಸುವರ್ಣ: 9164588660 (

ಬ್ಯಾಂಕ್ ಖಾತೆ: ರಾಕೇಶ್ ಎಂ: 5132500100895901

ಐ.ಎಫ್.ಎಸ್.ಸಿ ಕೋಡ್: KARB0000513

(Suma suvarna) Bank Account No: 20191644991

IFSC Code: SBIN0009051

Related Articles

LEAVE A REPLY

Please enter your comment!
Please enter your name here

Latest Articles