ನ್ಯೂಸ್ ನಾಟೌಟ್ : ಖ್ಯಾತ ಗಾಯಕ ಉದಿತ್ ನಾರಾಯಣ್ ವಿರುದ್ಧ ಅವರ ಮೊದಲ ಪತ್ನಿ ರಂಜನಾ ಗಂಭೀರ ಆರೋಪ ಮಾಡಿದ್ದಾರೆ. ಉದಿತ್ ಹಾಗೂ ಅವರ ಸಹೋದರರು 1996ರಲ್ಲಿ ತನ್ನ ಒಪ್ಪಿಗೆ ಇಲ್ಲದೆ ಗರ್ಭಕೋಶ ತೆಗೆಸಿದ್ದಾರೆ ಎಂದು ರಂಜನಾ ಬಿಹಾರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ದೆಹಲಿಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎಂದು ಅವರು ವಿವರಿಸಿದ್ದಾರೆ.

ವೈದ್ಯಕೀಯ ಚಿಕಿತ್ಸೆಗೆಂದು ತೆರಳಿದಾಗ ಗರ್ಭಕೋಶ ಇಲ್ಲದ ವಿಷಯ ರಂಜನಾಗೆ ಗೊತ್ತಾಗಿದೆಯಂತೆ. 1984ರ ಡಿಸೆಂಬರ್ 7ರಂದು ಹಿಂದೂ ಪದ್ಧತಿ ಪ್ರಕಾರ ರಂಜನ್ ಹಾಗೂ ಉದಿತ್ ವಿವಾಹ ಆದರು. ಉದಿತ್ ಸಂಗೀತ ವೃತ್ತಿಯನ್ನು ಮುಂದುವರಿಸಲು 1985ರಲ್ಲಿ ಮುಂಬೈಗೆ ಸ್ಥಳಾಂತರಗೊಂಡರು. ಅಲ್ಲಿ ಅವರು ದೀಪಾ ನಾರಾಯಣ್ ಅವರನ್ನು ಮದುವೆ ಆಗಿದ್ದಾರೆ ಎಂಬ ವಿಷಯ ರಂಜನಾಗೆ ಆಗ ತಿಳಿಯಿತು. ಕೇಳಿದರೆ ಯಾವುದೋ ಒಂದು ಸಬೂಬು ಹೇಳಿ ವಿಷಯ ಮರೆಸುತ್ತಿದ್ದರಂತೆ ಉದಿತ್.
1996ರಲ್ಲಿ ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ, ಉದಿತ್ ತನ್ನ ಸಹೋದರರಾದ ಸಂಜಯ್ ಕುಮಾರ್ ಝಾ ಮತ್ತು ಲಲಿತ್ ನಾರಾಯಣ್ ಝಾ ಜೊತೆಗೂಡಿ ದೆಹಲಿಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ತನ್ನ ಒಪ್ಪಿಗೆಯಿಲ್ಲದೆ ಗರ್ಭಕೋಶವನ್ನು ತೆಗೆಸಿದರು. ಆ ಸಮಯದಲ್ಲಿ ದೀಪಾ ನಾರಾಯಣ್ ಕೂಡ ಆಸ್ಪತ್ರೆಯಲ್ಲಿದ್ದರು’ ಎಂದು ರಂಜನಾ ಆರೋಪಿಸಿದ್ದಾರೆ.
2006ರಲ್ಲಿ ಮುಂಬೈಗೆ ಭೇಟಿ ನೀಡಿದಾಗ, ಉದಿತ್ ಮತ್ತು ದೀಪಾ ಅವರಿಂದ ದೌರ್ಜನ್ಯಕ್ಕೊಳಗಾಗಿರೋದಾಗಿ ಅವರು ಹೇಳಿಕೊಂಡಿದ್ದಾರೆ. ‘ನಾನು ಅಸ್ವಸ್ಥಳಾಗಿದ್ದೇನೆ. ಹೀಗಾಗಿ, ಉದಿತ್ ಅವರ ಬೆಂಬಲದ ಅಗತ್ಯವಿದೆ’ ಎಂದು ಅವರು ಕೋರಿಕೊಂಡಿದ್ದಾರೆ.













