27.7 C
Sullia
Sunday, March 8, 2026

ಅಂಗಡಿ ಮಾಲೀಕರೇ ಜೋಕೆ! ಪೋನ್ ಪೇ ಮೂಲಕ ಹಣ ವರ್ಗಾವಣೆ ಅಂತ ಯಾಮಾರಿಸ್ತಾರೆ!

ನ್ಯೂಸ್ ನಾಟೌಟ್ : ಅಂಗಡಿ ಮಾಲೀಕರೇ ಹುಷಾರ್. ನಿಮ್ಮ ಅಂಗಡಿಗೆ ಬಂದು ಬೇಕಾದ್ದೆಲ್ಲವನ್ನೂ ಖರೀದಿಸಿ, ಪೋನ್ ಪೇ ಮೂಲಕ ಹಣ ಪಾವತಿಸಿ ಹೋಗ್ತಾರೆ. ನಿಮ್ಮ ಪೋನ್ ಪೇ ಸ್ಪೀಕರ್ ನಲ್ಲೂ ಹಣ ಪಾವತಿ ಅಂತ ಸೌಂಡ್ ಬರುತ್ತೆ. ಆದರೇ, ನಿಮ್ಮ ಬ್ಯಾಂಕ್ ಅಕೌಂಟ್‌ಗೆ ದುಡ್ಡೇ ಬಂದಿರಲ್ಲ! ಇದು ಹೊಸ ಸ್ಕ್ಯಾಮ್!


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಅಂಗಡಿಯಲ್ಲಿ ಕಾಸ್ಟ್ಲಿ ಕಾಸ್ಟ್ಲಿ ಐಟ್ಸ್​ಂ ತಗೊಳೋದೇನೂ.. ಚಾಕ ಚಾಕ್​ ಅಂತ ಮೊಬೈಲ್​ನಲ್ಲಿ ಸ್ಕ್ಯಾನ್​ ಮಾಡಿ ಅಮೌಂಟ್​ ಪೇ ಮಾಡೋದೇನು. ಅಂಗಡಿಯಲ್ಲಿ ಖರೀದಿ ಮುಗಿಸಿ ಪೋನ್ ಪೇನಲ್ಲೇ ಪೇಮೆಂಟ್ ಮಾಡಿ, ಅಂಗಡಿಯಿಂದ ಜನರು ಹೊರ ಹೋಗುತ್ತಾರೆ.  ಆದರೇ, ಅಂಗಡಿಯವರ ಬ್ಯಾಂಕ್ ಖಾತೆಗೆ ಮಾತ್ರ ಹಣ ಬಂದೇ ಇರಲ್ಲ. ಇದು ಹೊಸ ಸ್ಕ್ಯಾಮ್ . 

ಯಲಹಂಕ ನ್ಯೂಟೌನ್​ನಲ್ಲಿ 10ಕ್ಕೂ ಹೆಚ್ಚು ಅಂಗಡಿಗಳಿಗೆ ಹೀಗೇನೇ ಮಾಸ್ಕ್ ಹಾಕ್ಕೊಂಡು ಬಂದು ಮಕ್ಮಲ್​ ಟೋಪಿ ಹಾಕಿ ಹೋಗಿದ್ದಾರೆ ಈ ಖದೀಮರು. ಸದ್ಯ ಈ ಕೃತ್ಯದ ಬಗ್ಗೆ ಯಲಹಂಕ ನ್ಯೂ ಟೌನ್ ಠಾಣೆಗೆ ಮೊಬೈಲ್ ಅಸೋಸಿಯೇಷನ್ ದೂರು ನೀಡಿದೆ. ಜೊತೆಗೆ ಹೀಗೆ ಕಳ್ಳಾಟ ಆಡಿದವರನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ.
ಫೇಕ್  ಆ್ಯಪ್ ಬಳಸಿ​  ಸ್ಕ್ಯಾನ್ ಮಾಡಿ ದುಡ್ಡು ಹಾಕದೆ ಜೂಟ್ ಆಗ್ತಾರೆ. 

ಶಾಕಿಂಗ್​ ಅನಿಸಿದ್ರು ಇದು ಸತ್ಯ. ಫೋನ್ ಪೇ ರೀತಿಯೇ ಕೆಲಸ ಮಾಡೋ ಈ ಆ್ಯಪ್​ ಬಳಸಿ1 ಕೋಟಿವರೆಗೂ ಹಣ ವರ್ಗಾವಣೆ ಮಾಡ್ಬೋದು. ಈ ಆ್ಯಪ್​ ಕೇವಲ ದುಡ್ಡು ಹಾಕಿದ್ದಾಗಿ ತೋರಿಸುತ್ತೆ ಅಷ್ಟೇ . ಸ್ಕ್ಯಾನರ್ ಬಾಕ್ಸ್​ನಲ್ಲೂ ಕೆಲವೊಮ್ಮೆ ಕ್ರೆಡಿಟ್ ಅಂತ ಬರುತ್ತೆ . ಆದರೆ ಹಣ ಮಾತ್ರ ಅಕೌಂಟ್​ಗೆ ಕ್ರೆಡಿಟ್​ ಆಗೋದೇ ಇಲ್ಲ. ಸೋ ವ್ಯಾಪಾರಸ್ಥರೇ, ಜನಸಾಮಾನ್ಯರೇ ಹ್ಯೂಜ್​ ಅಮೌಂಟ್​ ಅನ್ನ ಆನ್​ಲೈನ್​ ಟ್ರಾನ್ಸ್ಯಾಕ್ಷನ್​ ಮಾಡಿಸಿಕೊಳ್ಳೋ ಮುನ್ನ ಬಿ ಅಲರ್ಟ್​.

Related Articles

LEAVE A REPLY

Please enter your comment!
Please enter your name here

Latest Articles