39 C
Sullia
Tuesday, March 10, 2026

ಕಳೆದುಹೋದ ಮೊಬೈಲ್ ಗಳನ್ನು ಮರಳಿ ನೀಡಿದ `ಖಾಕಿ ಪಡೆ`: ಕೊಡಗಿನಲ್ಲಿ 104 ಮೊಬೈಲ್ ಫೋನ್‌ಗಳ ಹಸ್ತಾಂತರ!ಮಹಿಳೆಯರ ಕಣ್ಣಲ್ಲಿ ಆನಂದಭಾಷ್ಪ!

ನ್ಯೂಸ್ ನಾಟೌಟ್ : ಏನಿಲ್ಲದಿದ್ದರೂ ಬದುಕಬಹುದು, ಆದರೆ ಮೊಬೈಲ್ ಇಲ್ಲದೆ ಕಷ್ಟ” ಎನ್ನುವ ಕಾಲಘಟ್ಟವಿದು,ಅದು ಕೇವಲ‌ ಸಂವಹನಕ್ಕೆ ಮಾತ್ರ ಅಲ್ಲ. ಅವರ ಜೀವನದ ಅದೆಷ್ಟೋ ನೆನಪುಗಳ ಫೋಟೋ, ವಿಡಿಯೋ, ಆಡಿಯೋ ಮತ್ತು ಮೆಸೇಜುಗಳ ಬುತ್ತಿ ಮೊಬೈಲ್. ಅಂತಹ ಮೊಬೈಲ್ ಕಳೆದುಹೋದ್ರೆ ಆಗುವ ನೋವು ಅಂತಿಂತದ್ದಲ್ಲ. ಆದ್ರೆ ಅಂತಹ ನೆನಪುಗಳ ಹೊತ್ತಿಗೆ ಮರಳಿ ಸಿಕ್ಕರೆ ಎಷ್ಟು ಖುಷಿ ಆಗುತ್ತೆ ಅಲ್ವಾ..? ಅಂತಹ ಅಮೂಲ್ಯವಾದ ಕಾರ್ಯವನ್ನ ಮಾಡಿದೆ ಕೊಡಗು ಪೊಲೀಸ್.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಅಗಲಿದ ತಂದೆಯ ಜೊತೆಗಿನ ಫೋಟೋ ಮತ್ತೆ ಸಿಕ್ಕ ಸಂತಸ.. ಮಗ ಚಿಕ್ಕವನಿದ್ದಾಗಿನ ಫೋಟೋ ಮರಳಿ ನೋಡಿದಾಗ ಆನಂದಭಾಷ್ಪ.. ಅದೆಷ್ಟೋ ವರ್ಷಗಳ ಹಿಂದೆ ಮೆಸೇಜ್ ರೂಪದಲ್ಲಿ ಹಂಚಿಕೊಂಡ‌ ಭಾವನೆಗಳ ಬುತ್ತಿಯನ್ನು ಮತ್ತೆ ನೋಡಿದಾಗ ನೆನಪಾದ ಕಳೆದ ಕ್ಷಣಗಳು.. ಇಂತಹ ಭಾವನಾತ್ಮಕ ಕ್ಷಣಗಳಿಗೆ ಇವತ್ತು ಕೊಡಗು ಪೊಲೀಸ್ ಕಛೇರಿ ಸಾಕ್ಷಿಯಾಗಿತ್ತು. ಮಿಕ್ಸ್‌ಡ್ ಎಮೋಷನ್ ಅಂತಾರಲ್ವಾ ಹಾಗಿತ್ತು ಈ ಕ್ಷಣಗಳು.. ಇಷ್ಟಕ್ಕೆಲ್ಲಾ ಕಾರಣವಾಗಿದ್ದು, ಜೀವನದ ನೆನಪುಗಳ ಹೊತ್ತಿಗೆಯಾಗಿದ್ದ ಕಳೆದಹೋಗಿದ್ದ ಅವರ ಮೊಬೈಲ್‌ಗಳು ಅವರ ಕೈಸೇರಿದ್ದು.. ಅಲ್ಲಿ ಮರಳಿ ಮೊಬೈಲ್ ಸಿಗಲಿ ಎಂಬ ನೂರಾರು ಜನರ ಕನಸು ನನಸಾಗಿತ್ತು. ಮೊಬೈಲ್ ಕೊಟ್ಟಾಗ ಜನರಿಗಾದ ಖುಷಿ ನೋಡಿದ ಪೊಲೀಸರು ಕೂಡ ಸಾರ್ಥಕಭಾವ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಕಳೆದೊಂದು ತಿಂಗಳಿನಲ್ಲಿ ನೂರಾರು ಮಂದಿ ಮೊಬೈಲ್ ಕಳೆದುಕೊಂಡು ಮಡಿಕೇರಿಯ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಒಂದು ಸಿಂಪಲ್ ಮೊಬೈಲ್ ತಾನೆ ಅಂತ ನೆಗ್‌ಲೆಟ್ ಮಾಡದ ಕೊಡಗು ಸೈಬರ್ ಕ್ರೈಮ್ ಪೊಲೀಸರು ಕಳೆದುಹೋದ ಮೊಬೈಲ್‌ಗಳ ಬೆನ್ನುಬಿದ್ದು, ಕಳೆದ ಒಂದು ತಿಂಗಳಲ್ಲಿ ಬರೋಬ್ಬರಿ 11 ಲಕ್ಷಕ್ಕೂ ಅಧಿಕ ಮೌಲ್ಯದ 104 ಮೊಬೈಲ್‌ಗಳನ್ನು ಪತ್ತೆಹಚ್ಚಿದ್ದರು. ಇಂದು ಅವುಗಳನ್ನು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಕಳೆದುಹೋದ ಮೊಬೈಲ್‌ಗಳನ್ನ ಕರ್ನಾಟಕ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯದಿಂದಲೂ ಕೂಡ ರಿಕವರಿ ಮಾಡಿರುವ ಕೊಡಗು ಪೊಲೀಸರಿಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದರು. ಅಷ್ಟೇ ಅಲ್ಲದೆ ಕ್ಷೀಪ್ರ ಕಾರ್ಯಚರಣೆ ನಡೆಸಿದ ಪೊಲೀಸ್ ಸಿಬ್ಬಂದಿಗಳನ್ನು ಎಸ್ಪಿ ಕೂಡ ಅಭಿನಂಧಿಸಿದರು.

ಒಟ್ನಲ್ಲಿ ಕಳ್ಳತನವೋ, ಬಿದ್ದೋ, ಅಥವಾ ನಿರ್ಲಕ್ಷ್ಯದಿಂದಲೋ ಮೊಬೈಲ್ ಕಳೆದುಕೊಂಡು, ಅದರಲ್ಲಿನ ನೆನಪುಗಳ ಫೋಟೋ, ವಿಡಿಯೋ, ಆಡಿಯೋ ಮತ್ತು ಮೆಸೇಜುಗಳು ಮತ್ತೆ ಸಿಗಲಿ ಅಂತ ಕನಸು ಕಂಡವರು ಕನಸು ನನಸಾಗಿದೆ. ಯಾವುದೇ ಸಣ್ಣ ವಸ್ತು ಇರಲಿ ಕಳೆದೋದರೆ ಅದರೊಂದಿಗಿನ ನೆನಪು ಮಾತ್ರ ಯಾವತ್ತೂ ಕಾಡುತ್ತೆ. ಅಂತಹ ಅಮೂಲ್ಯವಾದ ನೆನಪುಗಳನ್ನು ಮತ್ತೆ ಮರಳಿಸಿದ ಕೊಡಗು ಪೊಲೀಸರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಅಲ್ವಾ..?

Related Articles

LEAVE A REPLY

Please enter your comment!
Please enter your name here

Latest Articles