27.7 C
Sullia
Sunday, March 8, 2026

ತಂದೆ ತಾಯಿ ಮಾಡಿದ ಪುಣ್ಯ ಮಕ್ಕಳಿಗೆ ಅನ್ವಯಿಸುತ್ತಾ?ಡಾ.ಬಸವರಾಜ ಗುರೂಜಿ ಹೇಳಿದ್ದೇನು?

ನ್ಯೂಸ್ ನಾಟೌಟ್ :ತಂದೆ ತಾಯಿ ಮಾಡಿದಂತಹ ಪುಣ್ಯ ಅಥವಾ ಪಾಪಗಳು ಮಕ್ಕಳಿಗೆ ಅನ್ವಯಿಸುತ್ತವೆಯೇ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹೇಗೆ ತಂದೆ ತಾಯಿಗಳ ಆಸ್ತಿ ಅಥವಾ ಸಾಲಗಳು ಮಕ್ಕಳಿಗೆ ವಾರಸುದಾರಿಕೆಯಿಂದ ಬರುತ್ತವೆಯೋ, ಹಾಗೆಯೇ ಅವರ ಪಾಪ ಮತ್ತು ಪುಣ್ಯದ ಫಲಗಳೂ ಸಹ ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಹಿಂದಿನ ಜನ್ಮದ ಕರ್ಮಫಲಗಳ ಆಧಾರದ ಮೇಲೆ ನಾವು ನಿರ್ದಿಷ್ಟ ತಂದೆ ತಾಯಿಗಳ ಹೊಟ್ಟೆಯಲ್ಲಿ ಹುಟ್ಟುತ್ತೇವೆ. ಪೋಷಕರು ಧರ್ಮ ಮಾರ್ಗದಲ್ಲಿ ಸಂಪಾದಿಸಿದ ಆಸ್ತಿ ಮಕ್ಕಳಿಗೆ ಶುಭ ತಂದರೆ, ಅಧರ್ಮದಿಂದ ಗಳಿಸಿದ ಸಂಪತ್ತು ಮಕ್ಕಳಿಗೆ ಕಷ್ಟಗಳನ್ನು ತರಬಹುದು. ಆಸ್ತಿಯ ದಾಖಲಾತಿ ಸಮಸ್ಯೆಗಳು ಅಥವಾ ಆರ್ಥಿಕ ತೊಂದರೆಗಳು ಪೋಷಕರ ಪಾಪದ ಪರಿಣಾಮಗಳಾಗಿರಬಹುದು. ಅಸಹಾಯಕರ ಮೇಲೆ ದೌರ್ಜನ್ಯ, ಮೋಸ, ಅಧಿಕ ಬಡ್ಡಿ ವಸೂಲಿ, ಅಧರ್ಮದ ನಡವಳಿಕೆಗಳು ಮುಂದಿನ ಪೀಳಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಆದ್ದರಿಂದ, ಕುಟುಂಬದ ಮತ್ತು ಮುಂದಿನ ಪೀಳಿಗೆಯ ಒಳಿತಿಗಾಗಿ ಧರ್ಮದ ಮಾರ್ಗದಲ್ಲಿ ನಡೆಯುವುದು ಅತಿ ಮುಖ್ಯ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles