ನ್ಯೂಸ್ ನಾಟೌಟ್: ನೀರಿನ ಬಿಲ್ ಕಟ್ಟಲಿಲ್ಲವೆಂದು ಕಾಲೋನಿಗೆ ಹರಿಯುತ್ತಿದ್ದ ನೀರನ್ನೇ ನಿಲ್ಲಿಸಿರುವ ಆರೋಪ ಮಂಡೆಕೋಲಿನ ಪೆರಾಲು ಭಾಗದ ಸಂಕೇಶದಿಂದ ಕೇಳಿ ಬಂದಿದೆ. ಕಳೆದ ಒಂದು ವಾರದಿಂದ 30 ರಿಂದ 40 ಮನೆಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ದಲಿತ ಕಾಲೋನಿಗೆ ನೀರನ್ನು ತಡೆಹಿಡಿದಿರುವ ಬಗ್ಗೆ ಈಗ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ನೀರಿನ ಬಿಲ್ ಕಟ್ಟದಿದ್ದರೆ ನೀರನ್ನು ನಿಲ್ಲಿಸುವ ಹಕ್ಕಿಲ್ಲ. ಹೀಗಿದ್ದರೂ ಕೂಡ ಕುಡಿಯುವ ನೀರನ್ನು ನಿಲ್ಲಿಸಿದ್ದು ಅಪರಾಧವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕೂಡಲೇ ನೀರಿನ ವ್ಯವಸ್ಥೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಹೋರಾಟ ನಡೆಸಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.













