27.7 C
Sullia
Sunday, March 8, 2026

ತಾಯಿ, ದೊಡ್ಡಮ್ಮರ ಖಾಸಗಿ ಫೋಟೋ ತೆಗೆದು ಪ್ರಿಯಕರನಿಗೆ ಕಳಿಸಿದ ಮಗಳು..!ತಾಯಿ, ದೊಡ್ಡಮ್ಮ ನಿದ್ರೆಯಲ್ಲಿದ್ದಾಗ ಖಾಸಗಿ ಫೋಟೋ ತೆಗೆದು ಕಳುಹಿಸಿದ್ಲು!

ನ್ಯೂಸ್ ನಾಟೌಟ್ : ಸ್ವಂತ ತಾಯಿ ಮತ್ತು ದೊಡ್ಡಮ್ಮನವರ ಖಾಸಗಿ ಫೋಟೋಗಳನ್ನು ತೆಗೆದು ಅದನ್ನು ತನ್ನ ಪ್ರಿಯಕರನಿಗೆ ಕಳುಹಿಸಿದ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಮಗಳು ಹಾಗೂ ಆಕೆಯ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ವಿವರಗಳು
ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 23 ವರ್ಷದ ಯುವತಿಯೊಬ್ಬಳು, ತಾನು ಓದಬೇಕು ಎಂದು ಪೋಷಕರ ಬಳಿ ಮೊಬೈಲ್ ಕೇಳಿ ಪಡೆದಿದ್ದಳು. ಕಳೆದ ತಿಂಗಳ ಹಿಂದೆ ಅಪರಿಚಿತ ಯುವಕನೊಬ್ಬನೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು ತಾಯಿಯ ಗಮನಕ್ಕೆ ಬಂದಿತ್ತು. ನಂತರ ವಿಚಾರಿಸಿದಾಗ ತಾಯಿಗೆ ಮೊಬೈಲ್ ನೀಡಲು ನಿರಾಕರಿಸಿದ್ದಳು. ಅಲ್ಲದೇ ಮೊಬೈಲ್ ಪಡೆದರೂ ಪಾಸ್​ವರ್ಡ್ ನೀಡಿರಲಿಲ್ಲ.

ಇತ್ತೀಚೆಗೆ, ಮಗಳ ನಡವಳಿಕೆಯಲ್ಲಿ ಭಾರೀ ಬದಲಾವಣೆ ಕಂಡುಬಂದಿದ್ದರಿಂದ ತಂದೆಯ ಮನವೊಲಿಸಿ ಮೊಬೈಲ್ ಹಾಗೂ ಪಾಸ್‌ವರ್ಡ್‌ಅನ್ನು ತಾಯಿ ಪಡೆದುಕೊಂಡಿದ್ದಾರೆ. ಮೊಬೈಲ್ ಪರಿಶೀಲನೆ ವೇಳೆ, ಭಯಾನಕ ಸತ್ಯ ಹೊರಬಿದ್ದಿದೆ.

ಮಗಳು, ತನ್ನ ತಾಯಿ ಮತ್ತು ದೊಡ್ಡಮ್ಮ ನಿದ್ರೆಯಲ್ಲಿದ್ದಾಗ ಅವರ ಖಾಸಗಿ ಫೋಟೋಗಳನ್ನು ತೆಗೆದಿದ್ದಾಳೆ. ಅಷ್ಟೇ ಅಲ್ಲದೆ, ಆ ಫೋಟೋಗಳನ್ನು ತನ್ನ ಪ್ರಿಯಕರನಿಗೆ ರವಾನಿಸಿರುವ ಆರೋಪ ಕೇಳಿಬಂದಿದೆ. ಈ ವಿಚಾರ ಬಯಲಾದಾಗ, ಮಗಳನ್ನು ಪ್ರಶ್ನಿಸಿದಾಗ, ತಾನು ಪ್ರೀತಿಸುತ್ತಿರುವ ಯುವಕನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ ಎನ್ನಲಾಗಿದೆ.

ತಾಯಿ, ಮಗಳಿಗೆ ಬುದ್ಧಿ ಹೇಳಿ, ಆ ಫೋಟೋಗಳನ್ನು ಡಿಲೀಟ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆಯಾಗಿದ್ದು, ದುರುದ್ದೇಶದಿಂದ ಈ ಕೃತ್ಯ ಎಸಗಿದ ಮಗಳು ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಯಿ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಯನ್ನು ಮುಂದುವರೆಸಿದ್ದಾರೆ. ಇಂತಹ ಪ್ರಕರಣಗಳು ಯುವ ಪೀಳಿಗೆಯಲ್ಲಿ ಹೆಚ್ಚುತ್ತಿರುವ ಸಾಮಾಜಿಕ ಅರಿವಿನ ಕೊರತೆಯನ್ನು ಎತ್ತಿ ತೋರಿಸುತ್ತಿವೆ

Related Articles

LEAVE A REPLY

Please enter your comment!
Please enter your name here

Latest Articles