37.4 C
Sullia
Sunday, March 8, 2026

ಕನಕಪುರದ ಕಾಡಂಚಿನ ಗ್ರಾಮದಲ್ಲಿ ಬರೋಬ್ಬರಿ 40 ಕಾಡಾನೆಗಳ ಹಿಂಡು ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ನ್ಯೂಸ್ ನಾಟೌಟ್ : ರಾಮನಗರದ ಕನಕಪುರದಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ಕಾಡಂಚಿನ ಗ್ರಾಮದ ಬಳಿ ಸುಮಾರು 40 ಕಾಡಾನೆಗಳು ಕನಕಪುರದ ತಾಲೂಕಿನ ಕಾಡುಶಿವನಹಳ್ಳಿ ಬಳಿ ಕಾಣಿಸಿಕೊಂಡಿವೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ತಮಿಳುನಾಡು ಅರಣ್ಯದಿಂದ ಬನ್ನೇರುಘಟ್ಟ ವನ್ಯಜೀವಿ ವಲಯಕ್ಕೆ ಬಂದಿರೋ 40 ಕಾಡಾನೆಗಳು ಅಕ್ಕಪಕ್ಕದ ಜಮೀನುಗಳಲ್ಲಿ ದಾಂಧಲೆ ನಡೆಸಿವೆ. ಶನಿವಾರ ಸಂಜೆ ಗ್ರಾಮದ ಹೊರವಲಯದಲ್ಲಿ ಕಾಡಾನೆ ಹಿಂಡು ನೋಡಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.


ಸ್ಥಳಕ್ಕೆ ಬನ್ನೇರುಘಟ್ಟ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ರಾತ್ರಿ ಕಾಡಾನೆಗಳನ್ನ ವಾಪಸ್ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟೊಟ್ಟಿಗೆ 40 ಕಾಡಾನೆಗಳು ಓಡಾಡುವ ದೃಶ್ಯ ಅರಣ್ಯ ಇಲಾಖೆ ಸಿಬ್ಬಂದಿಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

Related Articles

LEAVE A REPLY

Please enter your comment!
Please enter your name here

Latest Articles