ನವದೆಹಲಿ: ಭಾರತದಲ್ಲಿ ಫೇಸ್ ಬುಕ್ ನಿಯಂತ್ರಣ ಮಾಡುವುದು ಕಷ್ಟವಾಗುತ್ತಿದೆ ಎಂದು ಫೇಸ್ ಬುಕ್ ಆಂತರಿಕ ತನಿಖೆಯಲ್ಲಿ ತಿಳಿಸಿದೆ. ವರದಿಯನ್ನು ಆಧರಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ್ದು ದ್ವೇಷ ಭಾಷಣ, ಸುಳ್ಳು ಸುದ್ದಿಗಳು ಹಾಗೂ ಹಿಂಸಾಚಾರದ ಸಂಭ್ರಮ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದಿದೆ. ವರದಿಯಲ್ಲಿ ಹಿಂದೂ ಸಂಘಟನೆ ಬಜರಂಗದಳ ಮುಖ್ಯವಾಗಿ ಮುಸ್ಲಿಂ ವಿರೋಧಿ ಭಾವನೆಯನ್ನು ಕೆರಳಿಸುವ ಪೋಸ್ಟ್ ಗಳನ್ನು ಮಾಡುತ್ತಿತ್ತು ಎಂದು ಉಲ್ಲೇಖಿಸಲಾಗಿದೆ.
ಬಜರಂಗ ದಳವು ಧರ್ಮಾಧಾರಿತ ಹಿಂಸಾಚಾರವನ್ನು ಉದ್ದೀಪಿಸುವ ಕಾರಣ, ಫೇಸ್ ಬುಕ್ ಅದನ್ನು ಅಪಾಯಕಾರಿ ಸಂಘಟನೆ ಎಂದು ಪರಿಗಣಿಸಿತ್ತು. ಆದರೆ ಭಾರತದಲ್ಲಿ ಫೇಸ್ ಬುಕ್ ಗೆ ಹೆಚ್ಚಿನ ಅಧಿಕಾರ ಇಲ್ಲದೇ ಇದ್ದ ಕಾರಣಕ್ಕೆ, ಇಂತಹ ಪೋಸ್ಟ್ ಗಳ ನಿಯಂತ್ರಣ ಸಾಧ್ಯವಾಗಿರಲಿಲ್ಲ. ಭಾರತವೂ ಸೇರಿದಂತೆ ವಿಶ್ವದ ಹಲವೆಡೆ ಮುಸ್ಲಿಂ ವಿರೋಧಿ ಭಾವನೆಯನ್ನು ಕೆರಳಿಸುವ ಪೋಸ್ಟ್ ಗಳು ಹೆಚ್ಚಾಗುತ್ತಿದೆ. ಆದರೆ ಈಗ ಅದನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.