ನ್ಯೂಸ್ ನಾಟೌಟ್ : ಸಿಲಿಕಾನ್ ಸಿಟಿಯ ಲೈಫ್‌ಲೈನ್ ಎನಿಸಿಕೊಂಡಿರುವ ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ದರ ಏರಿಕೆಯ ಬರೆ ಎಳೆದಿದೆ. ಫೆಬ್ರವರಿ 9ರಿಂದ ಜಾರಿಗೆ ಬರುವಂತೆ ಮೆಟ್ರೋ ಟಿಕೆಟ್ ದರವನ್ನು ಶೇಕಡಾ 5ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
ದರ ಏರಿಕೆ:
ಮೆಟ್ರೋ ರೈಲ್ವೇ ಕಾಯ್ದೆ 2002ರ ಅಡಿಯಲ್ಲಿ ರಚಿಸಲಾದ ‘ಫೇರ್ ಫಿಕ್ಸೇಷನ್ ಕಮಿಟಿ’ (FFC) ಶಿಫಾರಸಿನಂತೆ ಈ ದರ ಪರಿಷ್ಕರಣೆ ಮಾಡಲಾಗಿದೆ. ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚ ಸರಿದೂಗಿಸಲು ಈ ಕ್ರಮ ಅನಿವಾರ್ಯ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಕಳೆದ 7.5 ವರ್ಷಗಳ ನಂತರ ಮೊದಲ ಬಾರಿಗೆ ಈ ದರ ಪರಿಷ್ಕರಣೆ ಮಾಡಲಾಗಿದ್ದು, ಭವಿಷ್ಯದಲ್ಲಿ ಒಮ್ಮಿಂದೊಮ್ಮೆಗೆ ದರ ಏರಿಕೆ ಮಾಡುವುದನ್ನು ತಪ್ಪಿಸಲು ಪ್ರತಿವರ್ಷ ‘ಸ್ವಯಂಚಾಲಿತ ದರ ಪರಿಷ್ಕರಣೆ’ ಜಾರಿಗೆ ತರಲು ನಿರ್ಧರಿಸಲಾಗಿದೆ.
ಪರಿಷ್ಕೃತ ಮೆಟ್ರೋ ದರ ಪಟ್ಟಿ:
ದೂರಕ್ಕೆ ಅನುಗುಣವಾಗಿ ಕನಿಷ್ಠ 1 ರೂಪಾಯಿಯಿಂದ ಗರಿಷ್ಠ 5 ರೂಪಾಯಿಗಳವರೆಗೆ ದರ ಹೆಚ್ಚಳವಾಗಿದೆ.
0-2 ಕಿ.ಮೀ: ₹10 ರಿಂದ ₹11ಕ್ಕೆ ಏರಿಕೆ
2-4 ಕಿ.ಮೀ: ₹20 ರಿಂದ ₹21ಕ್ಕೆ ಏರಿಕೆ
4-6 ಕಿ.ಮೀ: ₹30 ರಿಂದ ₹32ಕ್ಕೆ ಏರಿಕೆ
6-8 ಕಿ.ಮೀ: ₹40 ರಿಂದ ₹42ಕ್ಕೆ ಏರಿಕೆ
8-10 ಕಿ.ಮೀ: ₹50 ರಿಂದ ₹53ಕ್ಕೆ ಏರಿಕೆ
10-15 ಕಿ.ಮೀ: ₹60 ರಿಂದ ₹63ಕ್ಕೆ ಏರಿಕೆ
15-20 ಕಿ.ಮೀ: ₹70 ರಿಂದ ₹74ಕ್ಕೆ ಏರಿಕೆ
20-25 ಕಿ.ಮೀ: ₹80 ರಿಂದ ₹84ಕ್ಕೆ ಏರಿಕೆ
25 ಕಿ.ಮೀ ಮೇಲ್ಪಟ್ಟು: ₹90 ರಿಂದ ₹95ಕ್ಕೆ ಏರಿಕೆ
ಪ್ರಮುಖ ಮಾರ್ಗಗಳ ಹೊಸ ದರಗಳು:
ವೈಟ್‌ಫೀಲ್ಡ್ – ಚಲ್ಲಘಟ್ಟ (ಪರ್ಪಲ್ ಲೈನ್): ₹90 ರಿಂದ ₹95
ಸಿಲ್ಕ್ ಇನ್‌ಸ್ಟಿಟ್ಯೂಟ್ – ಮಾದಾವರ (ಗ್ರೀನ್ ಲೈನ್): ₹90 ರಿಂದ ₹95
ಮೆಜೆಸ್ಟಿಕ್ – ವೈಟ್‌ಫೀಲ್ಡ್: ₹80 ರಿಂದ ₹84
ಮೆಜೆಸ್ಟಿಕ್ – ಬೊಮ್ಮಸಂದ್ರ: ₹80 ರಿಂದ ₹84
ಆರ್.ವಿ ರಸ್ತೆ – ಬೊಮ್ಮಸಂದ್ರ (ಯೆಲ್ಲೋ ಲೈನ್): ₹60 ರಿಂದ ₹63













