ನ್ಯೂಸ್ ನಾಟೌಟ್: ಅಂಕತ್ತಡ್ಕದ ಸ್ವಾಮಿ ಕೊರಗಜ್ಜನ ಪುಣ್ಯ ಮಣ್ಣಿನಲ್ಲಿ ವರ್ಷಾವದಿ ಕೋಲೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೆ.7 ಮತ್ತು ಫೆ.8ಕ್ಕೆ ಐದನೇ ವರ್ಷದ ಮಂತ್ರವಾದಿ ಗುಳಿಗ, ಮರ್ಲ್ ಮಯ್ಯೋಂತಿ ಹಾಗೂ ಸ್ವಾಮಿ ಕೊರಗಜ್ಜ ಕೋಲೋತ್ಸವ ನಡೆಯಲಿದೆ. ಫೆ.7ರಂದು ಬೆಳಗ್ಗೆ 6ಕ್ಕೆ ಗಣಹೋಮ, ನವಕಲಷಾಭಿಷೇಕ, ಸಂಜೆ 5ಕ್ಕೆ ಸ್ವಾಮಿ ಕೊರಗಜ್ಜ ಭಜನಾ ತಂಡ ಅಂಕತ್ತಡ್ಕ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6ಕ್ಕೆ ಭಂಡಾರ ತೆಗೆಯುವುದು, ರಾತ್ರಿ 7ಕ್ಕೆ ಮಂತ್ರವಾದಿ ಗುಳಿಗ ನೇಮ, ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ, ರಾತ್ರಿ 9.30ಕ್ಕೆ ಮರ್ಲ್ ಮಯ್ಯೋಂತಿ ದೈವದ ನೇಮ ನಡೆಯಲಿದೆ. ಮರುದಿನ ಫೆ.8ಕ್ಕೆ ಬೆಳಗ್ಗೆ 8 ಗಂಟೆಗೆ ಸ್ವಾಮಿ ಕೊರಗಜ್ಜ ದೈವದ ಕೋಲ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.













