21.6 C
Sullia
Sunday, March 8, 2026

ಮದುವೆಗಾಗಿ ಜಾತಕ ತೋರಿಸಲು ಹೋದ ಯುವತಿ ಮೇಲೆ ಅರ್ಚಕನಿಂದ ಅತ್ಯಾಚಾರ?

ನ್ಯೂಸ್ ನಾಟೌಟ್ : ಮದುವೆಯಾಗುತ್ತಿರುವ ಯುವತಿ ತನ್ನ ಜಾತಕ ತೋರಿಸಲು ಹೋದಾಗ ಆಕೆ ಮೇಲೆ ದೇವಸ್ಥಾನದ ಅರ್ಚಕ ಅತ್ಯಾಚಾರ ಎಸಗಿರೋ ಆರೋಪದ ಪ್ರಕರಣ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ನಡೆದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಹೊರಟ್ಟಿ ಗ್ರಾಮದ ಪುರಾತನ ಈಶ್ವರ-ಪಾರ್ವತಿ ದೇವಸ್ಥಾನದ ಅರ್ಚಕ ಕೃಷ್ಣರಾವ್ ವಿರುದ್ಧ ಆರೋಪ ಕೇಳಿ ಬಂದಿದೆ. ನೊಂದ ಯುವತಿ ಬಣಕಲ್‌ ಠಾಣೆಗೆ ದೂರು ನೀಡಿದ್ದು ಬಣಕಲ್ ಪೊಲೀಸರು ಆರೋಪಿ ಕೃಷ್ಣರಾವ್‌ನನ್ನ ಬಂಧಿಸಿದ್ದಾರೆ. 

ಯುವತಿ ಜಾತಕ ತೋರಿಸಲು ಹೋದಾಗ 2025 ನವೆಂಬರ್ 23 ರಿಂದ 2026 ಫೆಬ್ರವರಿ 2 ರ ಅವಧಿಯಲ್ಲಿ ಅರ್ಚಕ ಹಲವು ಬಾರಿ ಅತ್ಯಾಚಾರ ನಡೆಸಿದ್ದಾನೆ. ಜಾತಕದಲ್ಲಿ ದೋಷ ಇದೆ. ಅದಕ್ಕೆ ತಡೆಯೊಡೆಯಬೇಕು ಎಂದು ಹೆದರಿಸಿ ಯುವತಿಗೆ ಹೆದರಿಸಿದ್ದನಂತೆ. ಇದೀಗ ನೊಂದ ಯುವತಿ ಅರ್ಚಕನ ವಿರುದ್ಧ ದೂರು ನೀಡಿದ್ದಾಳೆ. 

ಬಣಕಲ್‌ ಠಾಣೆಯಲ್ಲಿ ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 64(2)(m) ಹಾಗೂ ಅತ್ಯಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿರೋ ಬಣಕಲ್ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles