ನ್ಯೂಸ್ ನಾಟೌಟ್ : ಮಂಗಳೂರಿನ ಟಿ.ಎಂ.ಎ.ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ಜ.31 ಮತ್ತು ಫೆ.1 ರಂದು ಆಯೋಜಿಸಿದ ಆಯುಷ್ ಹಬ್ಬ-2026ರ ಅಂಗವಾಗಿ ಆಯುಷ್ ವೈದ್ಯಕೀಯ ಪದ್ಧತಿಯಲ್ಲಿ ಸಾಧನೆಗೈದವರಿಗೆ ಕೊಡಮಾಡುವ ಆಯುಷ್ ಶ್ರೀ ಪುರಸ್ಕಾರ ಸುಳ್ಯದ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ. ಅವರಿಗೆ ಲಭಿಸಿದೆ. ಅವರ ಆಯುರ್ವೇದ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.














