21.6 C
Sullia
Sunday, March 8, 2026

ನಾಲ್ಕು ಸಲ ಸತ್ತು ಬದುಕಿದ್ದೇನೆ, ಕಾಂತಾರ ನಿರ್ದೇಶಕ ರಿಷಭ್ ಶೆಟ್ಟಿ ಹೀಗೆ ಹೇಳಿದ್ಯಾಕೆ..?

ನ್ಯೂಸ್ ನಾಟೌಟ್: ಕಾಂತಾರ ಸಿನಿಮಾ ಚಾಪ್ಟರ್ 1 ಈಗ ಭಾರೀ ನಿರೀಕ್ಷೆ ಮೂಡಿಸಿದೆ. ಕನ್ನಡ, ಹಿಂದಿ, ಮಲಯಾಳಂ ಹಾಗೂ ತೆಲುಗು ಭಾಷೆಯ ಟ್ರೇಲರ್ ಬಿಡುಗಡೆ ಆಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಭಾರೀ ನಿರೀಕ್ಷೆ ಮೂಡಿಸಿರುವ ಸಿನಿಮಾದ ಬಗ್ಗೆ ನಟ, ನಿರ್ದೇಶಕ ರಿಷಭ್ ಶೆಟ್ಟಿ ಮಾತನಾಡಿದ್ದಾರೆ. “ನನ್ನ ಮಕ್ಕಳು ಸ್ಕೂಲ್ ಗೆ ಹೋಗೋದನ್ನ ನೋಡೋಕು ಟೈಮ್ ಸಿಗ್ತಿರ್ಲಿಲ್ಲ. ಫಾರಸ್ಟ್ ಮಿನಿಸ್ಟರ್ ಅವರಿಂದ ಹಿಡಿದು ಎಲ್ಲರಿಂದಲೂ ಸಿನಿಮಾಕ್ಕೆ ಸಹಕಾರ ಸಿಕ್ಕಿದೆ.

ಸರಿಯಾಗಿ ನಿದ್ರೆ ಮಾಡದೆ ಮೂರು ತಿಂಗಳಾಯಿತು. ಕೇವಲ 2 ಗಂಟೆ ಅಷ್ಟೇ ಮಲಗ್ತಿದ್ದೆ, ಲೆಕ್ಕ ಹಾಕಿದ್ರೆ ನಾನು ಸುಮಾರು ನಾಲ್ಕು ಸಲ ಸತ್ತು ಬದುಕಿದ್ದೇನೆ. ದೈವ ನನ್ನನ್ನು ಬದುಕಿಸಿದೆ ಎಂದು ತಿಳಿಸಿದ್ದಾರೆ.

‘ಸೆಟ್ಟಲ್ಲಿ ಹಾಗಾಯ್ತು, ಹೀಗಾಯ್ತು ಅಂತ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿತ್ತು. ಲೆಕ್ಕ ಹಾಕಿದರೆ ನಾಲ್ಕು ಅಥವಾ ಐದು ಸಲ ನಾನು ಹೋಗಿಯೇ ಬಿಡುತ್ತಿದ್ದೆ. ಆದರೆ ನಾನು ಇಂದು ಬದುಕಿ ಬಂದು ನಿಮ್ಮ ಮುಂದೆ ನಿಂತಿದ್ದೇನೆ. ಅದಕ್ಕೆ ನಮ್ಮ ಹಿಂದಿರುವ ದೈವ ಕಾರಣ ಎಂಬುದು ನನ್ನ ನಂಬಿಕೆ. ಇಡೀ ತಂಡದ ಪ್ರತಿಯೊಬ್ಬರಿಗೆ ದೈವ ಆಶೀರ್ವಾದ ಮಾಡಿದೆ’ ಎಂದು ರಿಷಬ್ ಶೆಟ್ಟಿ ಅವರು ಹೇಳಿದರು. 

Related Articles

LEAVE A REPLY

Please enter your comment!
Please enter your name here

Latest Articles