27.7 C
Sullia
Sunday, March 8, 2026

ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ

ನ್ಯೂಸ್ ನಾಟೌಟ್ : ಟಾಲಿವುಡ್ ನಟ ರಾಮ್ ಚರಣ್ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ  ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಜನಿಸಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಈ ಮೊದಲು, ಅಂದರೆ 2023ರಲ್ಲಿ ಈ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಮಗುವಿಗೆ ಕ್ಲಿನ್ ಕಾರಾ ಎಂದು ಹೆಸರು ಇಟ್ಟಿದ್ದರು. ಈಗ ಅವಳಿ ಮಕ್ಕಳು (Twins) ಜನಿಸಿದ ಸುದ್ದಿಯನ್ನು ರಾಮ್ ಚರಣ್ ತಂದೆ ಮೆಗಾ ಸ್ಟಾರ್ ಚಿರಂಜೀವಿ ಅವರು ಖಚಿತಪಡಿಸಿದ್ದಾರೆ.

ಚಿರಂಜೀವಿ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ‘ರಾಮ್ ಚರಣ್ ಮತ್ತು ಉಪಾಸನಾ ಅವರಿಗೆ ಅವಳಿ ಮಕ್ಕಳು ಜನಿಸಿವೆ ಎಂಬುದನ್ನು ತಿಳಿಸಲು ಬಹಳ ಸಂತೋಷ ಆಗುತ್ತಿದೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಅಜ್ಜ-ಅಜ್ಜಿ ಆದ ನಮಗೆ ಈ ಮಕ್ಕಳನ್ನು ಕುಟುಂಬಕ್ಕೆ ಸ್ವಾಗತಿಸುವುದು ಅತ್ಯಂತ ಖುಷಿಯ ಕ್ಷಣವಾಗಿದೆ’ ಎಂದು ಚಿರಂಜೀವಿ ಪೋಸ್ಟ್ ಮಾಡಿದ್ದಾರೆ.

ಮದುವೆಗೂ ಮುನ್ನ ರಾಮ್ ಚರಣ್ ಮತ್ತು ಉಪಾಸನಾ ಅವರು ಡೇಟಿಂಗ್ ಮಾಡುತ್ತಿದ್ದರು. 2011ರ ಡಿಸೆಂಬರ್​​ನಲ್ಲಿ ಅವರ ಎಂಗೇಜ್​ಮೆಂಟ್ ಆಗಿತ್ತು. 2012ರಲ್ಲಿ ಅವರಿಬ್ಬರು ಮದುವೆ ಮಾಡಿಕೊಂಡಿದ್ದರು. 11 ವರ್ಷಗಳ ನಂತರ ಉಪಾಸನಾ ಅವರು ಮೊದಲ ಮಗುವಿಗೆ ಜನ್ಮ ನೀಡಿದ್ದರು. ಈಗ ಅವರಿಗೆ ಅವಳಿ ಮಕ್ಕಳು ಜನಿಸಿವೆ

Related Articles

LEAVE A REPLY

Please enter your comment!
Please enter your name here

Latest Articles