27.7 C
Sullia
Sunday, March 8, 2026

ಮಾತು ತಪ್ಪಿದ ಬಿಗ್ ಬಾಸ್ ವಿನ್ನರ್ ಗಿಲ್ಲಿ! ಟ್ಯಾಟೂ ಹಾಕಿಸಿಕೊಂಡ ಫ್ಯಾನ್​ ಗರಂ!

ನ್ಯೂಸ್ ನಾಟೌಟ್ : ಬಿಗ್ ಬಾಸ್ ಕನ್ನಡ 12 (Bigg Boss Kannada Season 12) ಅಂತ್ಯವಾದರೂ ಗಿಲ್ಲಿ(Gilli) ಹವಾ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ವಿಶೇಷವಾಗಿ ಗಿಲ್ಲಿ ನಟನ ಜನಪ್ರಿಯತೆಯೇ ದಿನೇದಿನೇ ಹೆಚ್ಚುತ್ತಿದ್ದು, ಗಿಲ್ಲಿ ಭೇಟಿ ಮಾಡಲು ಲಕ್ಷಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Ad Widget
Ad Widget
Ad Widget
Ad Widget
Ad Widget
Ad Widget
Ad Widget

ಈ ನಡುವೆ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಮಾತನಾಡಿದ್ದ ಒಂದು ಮಾತು ಸದ್ಯ ವಿವಾದಕ್ಕೆ ಕಾರಣವಾಗಿದೆ. ಗಿಲ್ಲಿ ನಟನ ಟ್ಯಾಟೂ ಹಾಕಿಸಿಕೊಂಡು ಅಭಿಮಾನಿಯೊಬ್ಬರಿಗೆ , ಕೊಟ್ಟ ಮಾತನ್ನು ಉಳಿಸಿಲ್ಲ ಎಂದು ಗಿಲ್ಲಿ ನಟನ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ 12 ಟ್ರೋಫಿ ಗೆದ್ದ ಕ್ಷಣದಿಂದಲೇ ಗಿಲ್ಲಿ ನಟನ ಕ್ರೇಜ್ ಹೆಚ್ಚಾಗಿದೆ. ಸಿನಿಮಾತಾರೆಯರು, ರಾಜಕಾರಣಿಗಳು, ವಿವಿಧ ರಿಯಾಲಿಟಿ ಶೋಗಳು, ಸಮಾರಂಭಗಳು, ಕಾರ್ಯಕ್ರಮಗಳಿಗೆ ಗಿಲ್ಲಿ ನಟ ಅತಿಥಿಯಾಗಿದ್ದಾರೆ. ಹೀಗಾಗಿ ಅವರು ಎಲ್ಲವನ್ನೂ ಮ್ಯಾನೇಜ್ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವಾಗಿರುವುದು ಸಹಜ. ಆದರೂ ಸದ್ಯ ಎದುರಾದ ಟ್ಯಾಟೂ ವಿವಾದವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಬಿಗ್ ಬಾಸ್ ವೇಳೆ ಗಿಲ್ಲಿ ನಟ ತಮ್ಮ ಅಭಿಮಾನಿಗಳಲ್ಲಿ ಒಬ್ಬರು ತಮ್ಮ ಫೋಟೋವನ್ನೇ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎನ್ನುವ ವಿಚಾರ ಕೇಳಿ ತುಂಬಾ ಖುಷಿಪಟ್ಟಿದ್ದರು. ಹಾಗೆಯೇ ತಾವು ಮನೆಯಿಂದ ಹೊರಬಂದ ಕೂಡಲೇ ಆ ಅಭಿಮಾನಿಯನ್ನು ಭೇಟಿಯಾಗಿ ಧನ್ಯವಾದ ಹೇಳುತ್ತೇನೆ ಎಂದು ಮಾತು ನೀಡಿದ್ದರು.

Related Articles

LEAVE A REPLY

Please enter your comment!
Please enter your name here

Latest Articles