21.6 C
Sullia
Sunday, March 8, 2026

ಚಿನ್ನದ ಬೆಲೆ ಯಾವಾಗ ಕಡಿಮೆಯಾಗುತ್ತೆ? ಇಲ್ಲಿದೆ ಡಿಟೇಲ್ಸ್..

ನ್ಯೂಸ್ ನಾಟೌಟ್ : ಹೊಸ ವರ್ಷ ಬಂದು ಇನ್ನೂ ಒಂದು ತಿಂಗಳು ಕೂಡ ಆಗಿಲ್ಲ, ಅಷ್ಟರಲ್ಲೇ ಚಿನ್ನದ ಬೆಲೆ ಹೀಗೆ ಏರಿದ್ರೆ ಹೇಗೆ? ಕಳೆದ 10 ದಿನಗಳಲ್ಲೇ ಒಂದು  ಚಿನ್ನದ ಬೆಲೆ 23,200 ರೂಪಾಯಿ ಜಾಸ್ತಿ ಆಗಿದೆ. ಇನ್ನು 2026 ಶುರುವಾದಾಗಿನಿಂದ ಇಲ್ಲಿಯವರೆಗೂ ಲೆಕ್ಕ ಹಾಕಿದ್ರೆ, ಬರೋಬ್ಬರಿ 34,880 ರೂಪಾಯಿ ಏರಿಕೆಯಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಚಿನ್ನದ ಬೆಲೆ (Gold Price) ದಿನಕ್ಕೊಂದು ಹೊಸ ದಾಖಲೆ ಬರೀತಿದೆ. ಇವತ್ತಿನ ರೇಟ್ ಕೇಳಿದ್ರೆ ನಿಜಕ್ಕೂ ಶಾಕ್ (Shock) ಆಗುತ್ತೆ. ಜಾಗತಿಕವಾಗಿ ಆರ್ಥಿಕ ಅಸ್ಥಿರತೆ (Economic Instability) ಇರೋದ್ರಿಂದ ಪ್ರಪಂಚದ ಎಲ್ಲಾ ದೇಶಗಳು ಚಿನ್ನದ ಮೇಲೆ ಬಂಡವಾಳ (Investment) ಹಾಕ್ತಾ ಇವೆ. ಇದರಿಂದ ಬೆಲೆ ಗಗನಕ್ಕೆ ಹೋಗಿದೆ. ಕೇವಲ ಚಿನ್ನ ಮಾತ್ರವಲ್ಲ, ಬೆಳ್ಳಿ ಬೆಲೆಯೂ ರಾಕೆಟ್ ವೇಗದಲ್ಲಿ ಮುನ್ನುಗ್ಗುತ್ತಿದೆ. 2026ನೇ ಇಸವಿ ಶುರುವಾದಾಗಿನಿಂದ ಮಾರ್ಕೆಟ್‌ನಲ್ಲಿ ಚಿನ್ನದ ದರ್ಬಾರ್ ಜೋರಾಗಿದೆ.

ಇದಕ್ಕೆಲ್ಲಾ ಮುಖ್ಯ ಕಾರಣ ಏನು ಅಂತ ಆರ್ಥಿಕ ತಜ್ಞ ನಾಗಪ್ಪನ್ ಅವರನ್ನ ಕೇಳಿದ್ರೆ, ಅವರು ಡಾಲರ್ ಕಡೆ ಬೊಟ್ಟು ಮಾಡ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಮೌಲ್ಯ ಕುಸಿತ ಕಂಡಿದೆ. ಹೋದ ವರ್ಷ 110% ಇದ್ದ ಡಾಲರ್ ಇಂಡೆಕ್ಸ್ ಈಗ 96% ಗೆ ಇಳಿದಿದೆ. ಅಂದ್ರೆ ಸುಮಾರು 16% ರಷ್ಟು ಬಿದ್ದಿದೆ. ಡಾಲರ್ ವೀಕ್ ಆದಾಗಲೆಲ್ಲಾ ಸೇಫ್ ಇನ್ವೆಸ್ಟ್ಮೆಂಟ್ ಅಂತ ಜನ ಚಿನ್ನದ ಮೇಲೆ ಮುಗಿಬೀಳ್ತಾರೆ.

ಇಂಟರ್ನ್ಯಾಷನಲ್ ಮಾರ್ಕೆಟ್ ಅಲ್ಲಿ ಡಾಲರ್ ವೀಕ್ ಆಗಿರಬಹುದು, ಆದ್ರೆ ನಮ್ಮ ಲೋಕಲ್ ಮಾರ್ಕೆಟ್ ಅಲ್ಲಿ ಡಾಲರ್ ಮೌಲ್ಯ ರೂಪಾಯಿಗೆ ಹೋಲಿಸಿದ್ರೆ ಜಾಸ್ತಿಯೇ ಇದೆ. ಇದಕ್ಕೆ ಪ್ರಮುಖ ಕಾರಣ ನಮ್ಮಲ್ಲಿರೋ ಹಣದುಬ್ಬರ. ಇದರ ಜೊತೆಗೆ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ವಿದೇಶಿ ವಿನಿಮಯ ಮೀಸಲು (Forex Reserve) ಕಮ್ಮಿ ಆಗ್ತಿರೋದು ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಎಲ್ಲರಿಗೂ ಇರೋ ಒಂದೇ ಪ್ರಶ್ನೆ, ಈ ರೇಟ್ ಯಾವಾಗ ಇಳಿಯುತ್ತೆ ಅಂತ. ಆದ್ರೆ ನಾಗಪ್ಪನ್ ಅವರು ಹೇಳೋ ಪ್ರಕಾರ, ಜಾಗತಿಕ ರಾಜಕೀಯ ಉದ್ವಿಗ್ನತೆ (Geopolitical Tension) ಕಮ್ಮಿ ಆಗೋವರೆಗೂ ಚಿನ್ನ-ಬೆಳ್ಳಿ ಬೆಲೆ ಇಳಿಯೋದು ಡೌಟ್. ಯುದ್ಧದ ಭೀತಿ ಇರುವವರೆಗೂ ಮತ್ತು ಆರ್ಥಿಕ ಸ್ಥಿತಿ ಸುಧಾರಿಸುವವರೆಗೂ ಚಿನ್ನದ ಬೆಲೆ ಏರುತ್ತಲೇ ಇರುತ್ತೆ. ಸದ್ಯಕ್ಕೆ ಬೆಲೆ ಇಳಿಕೆ ಕನಸಿನ ಮಾತೇ ಸರಿ.

Related Articles

LEAVE A REPLY

Please enter your comment!
Please enter your name here

Latest Articles