ನ್ಯೂಸ್ ನಾಟೌಟ್ : ಸಂಪಾಜೆ ಗ್ರಾಮದ ಗೂನಡ್ಕದ ಪೆಲ್ತಡ್ಕ ವ್ಯಾಪ್ತಿಯಲ್ಲಿ ಆನೆಗಳ ಹಿಂಡು ರಾತ್ರಿ ವೇಳೆ ಕಂಡು ಬಂದಿದೆ.ಇವು ಕೃಷಿ ತೋಟಕ್ಕೆ ನುಗ್ಗಿ ಅಪಾರ ಕೃಷಿ ನಾಶ ಮಾಡಿದ ಘಟನೆ ಜ. 28ರಂದು ಸಂಭವಿಸಿದೆ.
ಜ. 28ರ ರಾತ್ರಿ 12.30ರ ವೇಳೆ ಗೂನಡ್ಕದ ಪ್ರಮೀಳ ಅವರ ಮನೆಯ ಮುಂಭಾಗದಲ್ಲಿ ಆನೆ ಹಿಂಡು ಕಾಣಿಸಿಕೊಂಡಿದೆ. ಈ ವೇಳೆ ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದು, ಸಿಡಿಮದ್ದು ಹೊಡಿಸಿ ಆನೆಗಳನ್ನು ಓಡಿಸಿದ್ದಾರೆ. ಆದರೆ ಆನೆ ಹಿಂಡು ತೋಟಕ್ಕೆ ನುಗ್ಗಿ, ತೆಂಗು, ಅಡಿಕೆ, ಬಾಳೆ ಗಿಡಗಳನ್ನು ಹಾನಿಮಾಡಿದೆ.
ಅಲ್ಲದೆ ಗಣೇಶ, ಜಗನ್ನಾಥ, ವಸಂತ , ಮನಮೋಹನ ಅವರ ತೋಟಕ್ಕೆ ನುಗ್ಗಿ ಕೃಷಿಗೆ ಹಾನಿ ಮಾಡಿದೆ.
ಆನೆ ದಾಳಿಯಿಂದ ಕೃಷಿಕರು ಆತಂಕಕ್ಕೆ ಒಳಗಾಗಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಹಾನಿಗೊಳಗಾದ ಕೃಷಿಕರ ತೋಟಕ್ಕೆ ಭೇಟಿ ನೀಡಿ ಆನೆ ಹಾವಳಿಯನ್ನು ತಡೆಗಟ್ಟುವ ಬಗ್ಗೆ ಕ್ರಮಕೈಗೊಳ್ಳಲು ಹಾಗೂ ಕೃಷಿ ಹಾನಿಗೊಳಗಾದವರಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.













