ನ್ಯೂಸ್ ನಾಟೌಟ್: ಸಾಮಾಜಿಕ ಜಾಲತಾಣದಲ್ಲಿ ಮಾತಿನಿಂದಲೇ ಸದ್ದು ಮಾಡುತ್ತಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಗೆ ಸದನದಲ್ಲಿ ಸ್ಪೀಕರ್ ಯುಟಿ ಖಾದರ್ ಬೆವರಿಳಿಸಿದ ಪ್ರಸಂಗ ಗುರುವಾರ ನಡೆದಿದೆ.
ಸದನದಲ್ಲಿ ಕೆಎಸ್ಆರ್ಟಿಸಿ ನೌಕರ ಆತ್ಮಹತ್ಯೆ ಯತ್ನ ಪ್ರಕರಣ ಜೋರಾಗಿ ಸದ್ದು ಮಾಡಿತ್ತು. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಸದಸ್ಯರು ಸದನದ ಬಾವಿಗಳಿದು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭ ಮಾತಿಗಿಳಿದ ಚಿಕ್ಕ ಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ತನ್ನ ಹಿಂದಿನ ಮಾತಿನ ಶೈಲಿಯಲ್ಲೇ ಮಾತು ಆರಂಭಿಸಿ ಸಭಾಧ್ಯಕ್ಷರೇ, ಒಂದು ಸಾವಿಗೆ ಇಷ್ಟು ಧರಣಿ ಮಾಡುತ್ತಿದ್ದರಲ್ಲ, ಕೋವಿಡ್ ಸಂದರ್ಭದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದರು. ಅವರಿಗೆ ಜಸ್ಟಿಸ್ ಕೊಡಿ ಅಂಥ ಕೇಳಕ್ಕಾಗಲ್ವ? ತಕ್ಷಣ ಮಧ್ಯ ಪ್ರವೇಶಿಸಿದ ಸ್ಪೀಕರ್ ಯು.ಟಿ. ಖಾದರ್ ಅವರು ‘ಹೇ ಸಾವು ಆಗಿಲ್ಲ ಮಾರಾಯ ಪ್ರದೀಪ್, ನೀನು ಮಧ್ಯೆ ಮಧ್ಯೆ ಮಾತಾಡಬೇಡ ಕೂತ್ಕೋ ಎಂದು ಗದರಿದ ಪ್ರಸಂಗ ನಡೆಯಿತು. ಆದರೂ, ತನ್ನ ತಪ್ಪಿನ ಅರಿವಾದರೂ ಪ್ರದೀಪ್ ಈಶ್ವರ್ ಮಾತ್ರ ಕೋವಿಡ್ ಸಂದರ್ಭ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಅವರಿಗೂ ನ್ಯಾಯ ಒದಗಿಸಬೇಕಲ್ವ ಅಧ್ಯಕ್ಷರೇ ಎಂದು ಪ್ರಶ್ನಿಸಿದರು.