27.7 C
Sullia
Sunday, March 8, 2026

ಸುಳ್ಯ: ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಆರಂಭ, ಮೂರು ದಿನಗಳ ಶ್ರೀದೇವರ ಉತ್ಸವ ಹೇಗಿರುತ್ತೆ..?

ನ್ಯೂಸ್ ನಾಟೌಟ್: ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಆರಂಭವಾಗಿದೆ. ಇನ್ನು ಮೂರು ದಿನಗಳ ಕಾಲ ಶ್ರೀ ದೇವರ ಉತ್ಸವ ನಡೆಯಲಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಜ.26ರಂದು ಸೋಮವಾರ ಸಂಜೆ 4ರಿಂದ ಸಂಸ್ಕಾರ ದೀಪಿಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಗವದ್ಗೀತೆ ಪಠಣ ಮತ್ತು ವಿಷ್ಣು ಸಹಸ್ರ ನಾಮ ಪಾರಾಯಣ ಮಾಡಲಿದ್ದಾರೆ. ಸಂಜೆ 6ರಿಂದ ಜಾತ್ರೋತ್ಸವದ ಪ್ರಯುಕ್ತ ಶ್ರೀ ದೇವರಿಗೆ ದೀಪೋತ್ಸವ ನಡೆಯಲಿದೆ. ಸಂಜೆ 6.15ರಿಂದ ವೇದಪಾರಾಯಣ ನಡೆಯಲಿದೆ. ಸಂಜೆ 7.30ಕ್ಕೆ ಮಹಾಪೂಜೆ ಬಳಿಕ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ವೈವಿದ್ಯ, ಅನ್ನಸಂತರ್ಪಣೆ ನಡೆಯಲಿದೆ. ಜ.27ರಿಂದ ಗಣಪತಿ ಹವನ, ಉಗ್ರಾಣ ತುಂಬಿಸುವುದು, ಹಸಿರುವಾಣಿ ಮೆರವಣಿಗೆ, ತಂತ್ರಿಗಳ ಆಗಮನ., ಶುದ್ಧೀ ಕಲಶ, ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ, ಮಹಾಪೂಜೆ ಮತ್ತು ಅನ್ನಸಂತರ್ಪಣೆ, ಶ್ರೀ ದೇವರ ಭೂತಬಲಿ ಉತ್ಸವ ಮತ್ತು ಕಟ್ಟೆ ಪೂಜೆ ನಡೆಯಲಿದೆ. ಜ.28ರಂದು ದೇವರ ಶ್ರೀ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಶ್ರೀಮುಡಿ ಗಂಧ ಪ್ರಸಾದ ಮತ್ತು ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ, ಶ್ರೀ ದೇವರಿಗೆ ರಂಗಪೂಜೆ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಎಲ್ಲ ಭಕ್ತರನ್ನು ಆಡಳಿತ ಮಂಡಳಿಯ ಪರವಾಗಿ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಅಧ್ಯಕ್ಷರಾದ ಎಂ. ವೆಂಕಪ್ಪ ಗೌಡ ಅವರು ಸ್ವಾಗತಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles