ನ್ಯೂಸ್ ನಾಟೌಟ್ : ವಿಶ್ವದಲ್ಲೇ ಬೆಂಗಳೂರಿನಲ್ಲಿ ಟ್ರಾಫಿಕ್ ಹೆಚ್ಚಳವಾಗಿದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ದೇಶಗಳಲ್ಲಿ ಇರುವವರೆಲ್ಲಾ ಬೆಂಗಳೂರಿಗೆ ಬಂದು ವಾಸಿಸುತ್ತಿದ್ದಾರೆ. ಒಂದು ಬಾರಿ ಬೆಂಗಳೂರಿಗೆ ಬಂದವರು ಮತ್ತೆ ವಾಪಸ್ ತೆರಳುತ್ತಿಲ್ಲ. ಇಲ್ಲಿನ ವಾತಾವರಣ ಐಟಿ ಬಿಟಿ ಬ್ಯಸಿನೆಸ್ ಕಾರಿಡಾರ್ ಗೆ ಜನ ಮುಗಿ ಬೀಳ್ತಿದ್ದಾರೆ. ಅದನ್ನ ದೃಷ್ಟಿಯಲ್ಲಿ ಇಟ್ಟುಕೊಂಡು ಅಭಿವೃದ್ಧಿ ಕೆಲಸಗಳನ್ನ ಮಾಡಬೇಕು. ಅದನ್ನ ಬಿಟ್ಟು ಕೇವಲ ಟೀಕೆಗಳನ್ನ ಮಾಡಿಕೊಂಡು ಸಮಯ ವ್ಯರ್ಥ ಮಾಡೋದು. ಅಂಡರ್ ಗ್ರೌಂಡ್ ಮಾಡ್ತೀನಿ ಅಂತ ಕಾಲಾಹರಣ ಮಾಡೋದು ರಾಜಕೀಯವಲ್ಲ ಎಂದು ಅಂತ ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ದ ಕಿಡಿಕಾರಿದರು.
ಬೆಂಗಳೂರಿನ ಉತ್ತಮ ವಾತಾವರಣ, ಐಟಿ–ಬಿಟಿ ಉದ್ಯಮಗಳು ಹಾಗೂ ವ್ಯಾಪಾರಿಕ ಅವಕಾಶಗಳು ಜನರನ್ನು ಹೆಚ್ಚಾಗಿ ಆಕರ್ಷಿಸುತ್ತಿವೆ. ಐಟಿ–ಬಿಟಿ ಬಿಸಿನೆಸ್ ಕಾರಿಡಾರ್‌ಗಳತ್ತ ಜನರು ನಿರಂತರವಾಗಿ ಹರಿದು ಬರುತ್ತಿರುವುದೇ ಟ್ರಾಫಿಕ್ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಇದೇ ವೇಳೆ ಬೆಂಗಳೂರು ಉಪ ನಗರ ರೈಲ್ವೆ ಯೋಜನೆ ಕುರಿತು ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ಹಿಂದೆ ನಾನು ಮೂಲಸೌಕರ್ಯ ಸಚಿವನಾಗಿದ್ದ ಸಂದರ್ಭದಲ್ಲಿ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಕುರಿತು ಪ್ರಧಾನಮಂತ್ರಿಗಳ ಬಳಿ ನಾವು ಮನವಿ ಸಲ್ಲಿಸಿದ್ದೆವು. ಈಗ ಈ ಯೋಜನೆಯನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಚರ್ಚೆ ನಡೆದಿದೆ” ಎಂದು ತಿಳಿಸಿದರು.













