ನ್ಯೂಸ್ ನಾಟೌಟ್ : ಈ ಬಾರಿ ಮಳಯಬ್ಬರ ಜೋರಾಗಿತ್ತು. ಆದರೂ ಮಳೆ ಮಾತ್ರ ಇನ್ನೂ ನಿಂತಿಲ್ಲ.ಇನ್ನೆನೂ ಮಳೆ ನಿಂತು ಹೋಯಿತು ಅನ್ನೋ ವೇಳೆಗೆ ಮತ್ತೆ ಮಳೆಯಾಗುವ ಲಕ್ಷಣ ಕಾಣಿಸುತ್ತಿದೆ.
ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಲಿದ್ದು, ಉಳಿದೆಡೆ ಒಣಹವೆ ಮುಂದುವರೆಯಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ ಎಂದು ವರದಿಯಾಗಿದೆ.
ಗೇರುಸೊಪ್ಪ, ಹೊನ್ನಾವರ, ಮಂಕಿ, ಶಿರಾಲಿ, ಗೋಕರ್ಣ, ಕುಮಟಾ, ಕಾರವಾರ, ಅಂಕೋಲಾ, ಹುಂಚದಕಟ್ಟೆ, ಭಾಗಮಂಡಲ, ಕದ್ರಾ, ಕ್ಯಾಸಲ್ರಾಕ್, ಕುಂದಾಪುರ, ಸಿದ್ದಾಪುರ, ಕೊಟ್ಟಿಗೆಹಾರ, ತ್ಯಾಗರ್ತಿ, ಬಂಟವಾಳ, ಬೆಳ್ತಂಗಡಿ, ಪುತ್ತೂರು, ಬನವಾಸಿ, ಧರ್ಮಸ್ಥಳ, ಕಮ್ಮರಡಿ, ಕೊಪ್ಪ, ಮಾಣಿ, ಮೂಡುಬಿದಿರೆಯಲ್ಲಿ ಮಳೆಯಾಗಿದೆ.
ಮುಲ್ಕಿ, ನಾಪೋಕ್ಲು, ಪೊನ್ನಂಪೇಟೆ, ಶಿಗ್ಗಾಂವ್, ಶೃಂಗೇರಿ, ಆಗುಂಬೆ, ಹಿರೇಕೆರೂರು, ಯಲ್ಲಾಪುರ, ಆಗುಂಬೆ, ಖಾನಾಪುರ, ಕಿರವತ್ತಿ, ಕೋಟಾ, ಲೋಂಡಾ, ಮಂಗಳೂರು, ಮಾನ್ವಿ, ಶಕ್ತಿನಗರದಲ್ಲಿ ಮಳೆಯಾಗಿದೆ.













