ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತಿದೊಡ್ಡ ರೂಫ್ ಟಾಪ್ ಸೌರ ವಿದ್ಯುತ್ ಘಟಕ ಸ್ಥಾಪಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭ ಶುಕ್ರವಾರ (ಜ.23ರಂದು) ನೆರವೇರಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಉಪಾಧ್ಯಕ್ಷೆ ಶೋಭಾ ಚಿದಾನಂದ ದೀಪ ಬೆಳಗುವಿದರೊಂದಿಗೆ ಸೌರ ವಿದ್ಯುತ್ ಘಟಕಕ್ಕೆ ವಿದ್ಯುಕ್ತ ಚಾಲನೆ ನೀಡಿದರು.




ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಅಧ್ಯಕ್ಷ ಡಾ ಕೆವಿ ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಎ.ಒ.ಎಲ್.ಇ (ರಿ.) ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ. ಸಿ, ಕಾರ್ಯದರ್ಶಿ ಐಶ್ವರ್ಯ ಕೆ.ಸಿ, ಹೇಮಾನಾಥ್ ಕೆ. ವಿ, ಕಾಲೇಜಿನ ಡೀನ್ ಡಾ ನೀಲಾಂಬಿಕೈ ನಟರಾಜನ್, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ ಸಿ ರಾಮಚಂದ್ರ ಭಟ್, ಹೆಲಿಯೊಸ್ ಸೊಲಾರ್ ಸಂಸ್ಥೆಯ ಮಾಲಕ ಸುಹಾಸ್ ಸೇರಿದಂತೆ ಸಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.
1,20,000 ಯೂನಿಟ್ ವಿದ್ಯುತ್ ಉತ್ಪಾದನೆ
ಮಂಗಳೂರು ವಿಭಾಗದಲ್ಲಿ ಮೊದಲ ಬಾರಿಗೆ ಅಳವಡಿಸಲಾದ ಈ ಸೌರ ವಿದ್ಯುತ್ ಘಟಕವು 990 ಕಿಲೋವಾಟ್ ಸಾಮರ್ಥ್ಯ ಹೊಂದಿದ್ದು, ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಘಟಕದಲ್ಲಿ ಜರ್ಮನಿಯ ಲಕ್ಸ್ರಾ ಸೋಲಾರ್ ಕಾಫ್ (LUXRA SOLARKAUF) ಕಂಪನಿಯ ಗ್ಲಾಸ್-ಟು-ಗ್ಲಾಸ್ ತಂತ್ರಜ್ಞಾನದ ಸೌರ ಫಲಕಗಳನ್ನು ಬಳಸಲಾಗಿದ್ದು, ರೂಫ್ ಗೆ ಹಾನಿಯಾಗದಂತೆ ನಾನ್-ಪೆನೆಟ್ರೇಟಿವ್ ಮಾಂಟಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಇದರ ಮೂಲಕ ವರ್ಷಕ್ಕೆ ಸುಮಾರು 1,200 ರಿಂದ 1,500 ಟನ್ ಕಾರ್ಬನ್ ಡೈಆಕ್ಸೈಡ್ ಬಿಡುಗಡೆ ಕಡಿತಗೊಳ್ಳಲಿದ್ದು, ಪ್ರತೀ ತಿಂಗಳು ಸುಮಾರು 1,20,000 ಯೂನಿಟ್‌ಗಳಷ್ಟು ಶುದ್ಧ ವಿದ್ಯುತ್ ಉತ್ಪಾದನೆಯಾಗಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಯ ಸ್ಥಾಪನಾ ಕಾರ್ಯವನ್ನು ಬೆಂಗಳೂರಿನ ಹೆಲಿಯೊಸ್ ಸೊಲಾರ್ ಸಂಸ್ಥೆ ಯಶಸ್ವಿಯಾಗಿ ನೆರವೇರಿಸಿದೆ. ಪರಿಸರ ಸಂರಕ್ಷಣೆ ಹಾಗೂ ನವೀಕರಿಸಬಹುದಾದ ಶಕ್ತಿ ಬಳಕೆಗೆ ಮಾದರಿಯಾಗಿರುವ ಈ ಯೋಜನೆ, ಸಮಾಜಕ್ಕೆ ಉತ್ತಮ ಕೊಡುಗೆಯಾಗಿದೆ.













