ನ್ಯೂಸ್ ನಾಟೌಟ್ : ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಮಂಗಳೂರಿನ ಜನರನ್ನು, ವಿಶೇಷವಾಗಿ ತುಳು ಭಾಷಿಕರನ್ನು ಸೋಶಿಯಲ್ ಮೀಡಿಯಾದಲ್ಲಿ ನಕ್ಕು ನಗಿಸಿದ್ದ ಫೇಮಸ್ ರೀಲ್ಸ್ ಸ್ಟಾರ್ ಆಶಾ ಪಂಡಿತ್ ನಿಧನರಾಗಿದ್ದಾರೆ .
ಈ ಬಗ್ಗೆ ಸ್ವತಃ ಅವರ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಲಾಗಿದ್ದು, ನಿನ್ನೆ ರಾತ್ರಿ ಆಶಾ ಪಂಡಿತ್ ಅವರು ಹೃದಯಾಘಾತದಿಂದ ನಿಧನ ಹೊಂದಿದರು ಎಂದು ವರದಿಯಾಗಿದೆ. ನಿನ್ನೆ ತಡರಾತ್ರಿ ಆಶಾ ಪಂಡಿತ್ ಅವರಿಗೆ ವಾಂತಿ ಸಮಸ್ಯೆ ಉಂಟಾಗಿದ್ದು, ಮನೆಯ ಅಂಗಳದಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಅದಾಗಲೇ ಹೃದಯಾಘಾತದಿಂದ ಕೊನೆಯುಸಿರೆಳಿದ್ದರು ಎಂದು ವೈದ್ಯರು ಘೋಷಿಸಿದರು.
ಆಶಾ ಪಂಡಿತ್ ಅವರ ನಿಧನದ ಸುದ್ದಿ ಅವರ ಅಭಿಮಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದ್ದು, ಈ ಸುದ್ದಿ ನಿಜಕ್ಕೂ ನಂಬೋಕೆ ಸಾಧ್ಯವಿಲ್ಲ ಎಂದು ನೂರಾರು ಜನರು ಅವರ ಪೋಸ್ಟ್‌ನಲ್ಲಿ ಕಾಮೆಂಟ್ ಹಾಕುತ್ತಿದ್ದಾರೆ. ಪ್ರತಿನಿತ್ಯ ಬೈಗುಳದ ಪೋಸ್ಟ್‌ಗಳ ಮೂಲಕವೇ ಜನರನ್ನು ಮನರಂಜಿಸುತ್ತಿದ್ದ ಆಶಾ ಪಂಡಿತ್ ಅವರ ಪೋಸ್ಟ್‌ಗಳಿಗೆ ನಗುತ್ತಾ, ಬೈಯ್ಯುತ್ತಾ ಕಾಮೆಂಟ್ ಹಾಕುತ್ತಿದ್ದ ಜನರು ಇಂದು ಕಣ್ಣೀರಿನ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.













