27.7 C
Sullia
Sunday, March 8, 2026

ಸ್ವಂತ ಖಾತೆಗೆ ಪ್ರಯಾಣಿಕರಿಂದ ಟಿಕೆಟ್ ಹಣ,ಮೂವರು ಬಸ್ ನಿರ್ವಾಹಕರು ಸೇವೆಯಿಂದ ಅಮಾನತು

ನ್ಯೂಸ್ ನಾಟೌಟ್ : ತಮ್ಮ ಸ್ವಂತ ಬ್ಯಾಂಕ್ ಖಾತೆಗೆ ಪ್ರಯಾಣಿಕರಿಂದ
ಟಿಕೆಟ್ ಹಣ ಹಾಕಿಸಿಕೊಂಡು ಬೆಂಗಳೂರು ಮಹಾನಗರ ಸಾರಿಗೆ
ನಿಗಮ (ಬಿಎಂಟಿಸಿ)ದ ಮೂವರು ಕಂಡಕ್ಟರ್‌ಗಳು ಇದೀಗ ಸಿಕ್ಕಿಬಿದ್ದಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಯುಪಿಐ ಸ್ಕ್ಯಾನರ್ ಟಿಕೆಟ್ ವ್ಯವಸ್ಥೆ ದುರುಪಯೋಗಪಡಿಸಿಕೊಂಡ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಈ ನಿರ್ವಾಹಕರನ್ನು
ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.


ನಿರ್ವಾಹಕ ಸುರೇಶ್ (ಘಟಕ 23) ಚಾಲಕ-ನಿರ್ವಾಹಕ ಮಂಚೇಗೌಡ (ಘಟಕ-3), ನಿರ್ವಾಹಕ ಅಶ್ವಾಕ್‌ಖಾನ್(ಘಟಕ-14) ಸೇವೆಯಿಂದ
ಅಮಾನತುಗೊಂಡವರು.


ಬಿಎಂಟಿಸಿ ಸಂಸ್ಥೆಯು ಚಿಲ್ಲರೆ ಸಮಸ್ಯೆ ಪರಿಹಾರದ ಭಾಗವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಯುಪಿಐ ಸ್ಕ್ಯಾನರನ್ನು ಪ್ರತಿ ಬಸ್‌ಗಳಲ್ಲಿ ಅಳವಡಿಸಿದೆ. ಆದರೆ, ಈ ನಿರ್ವಾಹಕರು ಟಿಕೆಟ್ ನೀಡುವಾಗ ಬಿಎಂಟಿಸಿಯ ಅಧಿಕೃತವಾದ ಯುಪಿಐ ಸ್ಕ್ಯಾನರ್ ಬಳಸದೆ ತಮ್ಮ ವೈಯಕ್ತಿಕ ಯುಪಿಐ ಖಾತೆಗೆ ಸಾವಿರಾರು ರೂಪಾಯಿ ಟಿಕೆಟ್ ಮೊತ್ತವನ್ನು ಪಾವತಿಸಿಕೊಂಡು ದುರ್ಬಳಕೆ ಮೂಲಕ ನಿಗಮದ ಹಣಕಾಸು ಶಿಸ್ತು ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದೆ ಎಂದು ಪ್ರಕಟಣೆಯಲ್ಲಿ
ತಿಳಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Latest Articles