37.4 C
Sullia
Sunday, March 8, 2026

ಬೆಂಗಳೂರು:ನಡುರಸ್ತೆಯಲ್ಲೇ ಧಗಧಗನೇ ಹೊತ್ತಿ ಉರಿದ ಕಾರು:ಮುಂದೇನಾಯ್ತು?

ನ್ಯೂಸ್ ನಾಟೌಟ್ : ಚಲಿಸುತ್ತಿದ್ದ ಕಾರು ನಡುರಸ್ತೆಯಲ್ಲೇ ಹೊತ್ತು ಉರಿದು ಕರಕಲಾಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ನಡುರಸ್ತೆಯಲ್ಲೇ ಬೆಳಗ್ಗೆ 7:30 ರ ಸುಮಾರಿಗೆ ವರ್ಣ ಕಾರು ಧಗಧಗನೆ ಬೆಂಕಿಗೆ ಆಹುತಿಯಾಗಿದೆ. ಯಶವಂತಪುರದಿಂದ ಟಾಟಾ ಇನ್ಸ್ಟಿಟ್ಯೂಟ್ ಕಡೆಗೆ ಹೋಗುವ ರಸ್ತೆಯಲ್ಲಿ ಘಟನೆ ನಡೆದಿದೆ.‌ ಕಾರಿನಲ್ಲಿದ್ದ ಮೂವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಬೆಂಕಿಗಾಹುತಿಯಾದ ವೈಟ್ ಬೋರ್ಡ್ ವರ್ಣ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಕಾರನ್ನು ಸ್ಟಾರ್ಟ್ ಮಾಡಿ ಕೇವಲ ಒಂದು ಕಿಮೀ ದೂರ ಕ್ರಮಿಸಲಾಗಿತ್ತು. ಕಾರಿನ‌ ಇಂಜಿನ್ ಭಾಗದಲ್ಲಿ ಬೆಂಕಿ, ಹೊಗೆ ಕಾಣಿಸಿಕೊಂಡಿದೆ.‌ ಕೂಡಲೇ ಕಾರಿನಲ್ಲಿದ್ದವರು ಇಳಿದು ಬಚಾವ್ ಆಗಿದ್ದಾರೆ.

ಬೆಂಕಿಯನ್ನ ನಂದಿಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಅಗ್ನಿಶಾಮಕದಳ ಸ್ಥಳಕ್ಕೆ ಬರುವ ಹೊತ್ತಿಗೆ ಬೆಂಕಿ ‌ಸಂಪೂರ್ಣ ಕಾರನ್ನು ಆವರಿಸಿತ್ತು.‌ ಕೇವಲ 5 ನಿಮಿಷದಲ್ಲಿ ಸಂಪೂರ್ಣ ಕಾರು ಹೊತ್ತಿ ಉರಿದಿದೆ. ಕಾರು ಬೆಂಕಿಗೆ ಆಹುತಿಯಾಗಲು ಬ್ಯಾಟ್ರಿ ಶಾರ್ಟ್ ಸರ್ಕ್ಯೂಟ್ ಅಥವಾ ಇಂಜಿನ್ ಸಮಸ್ಯೆ ಕಾರಣ ಇರಬಹುದು ಎನ್ನಲಾಗಿದೆ. 

ಬೆಂಕಿಗೆ ಕಾರು ಆಹುತಿಯಾಗಲು ಕಾರಣವೇನು ಅಂತ ತನಿಖೆಯಿಂದಷ್ಟೇ ತಿಳಿಯಬೇಕಿದೆ. ಯಶವಂತಪುರ ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles