ನ್ಯೂಸ್ ನಾಟೌಟ್ : ತಾಯಿ ಆಸೆಯನ್ನು ಈಡೇರಿಸಲೆಂದು ಮಗ ತಂದೆಯ ಬೈಕಿನಲ್ಲಿ ದೇಶವನ್ನೇ ಸುತ್ತಿಸಿರುವ ಘಟನೆ ಬಗ್ಗೆ ವರದಿಯಾಗಿದೆ. ಕೂಡು ಕುಟುಂಬದಲ್ಲಿ ಅಡುಗೆ ಮನೆಗಷ್ಟೆ ಸೀಮಿತವಾಗಿದ್ದ ಅಮ್ಮನನ್ನು, ಅಪ್ಪ ಕೊಡಿಸಿದ್ದ ಬಜಾಜ್ ಚೇತಕ್ ಸ್ಕೂಟರ್‌ನಲ್ಲಿ ಭಾರತದ ಎಲ್ಲಾ ರಾಜ್ಯವನ್ನು ಒಳಗೊಂಡಂತೆ ಸುತ್ತಮುತ್ತಲ ಮೂರು ದೇಶಗಳಿಗೆ ಕರೆದೊಯ್ದು, ಅಲ್ಲಿನ ಪುಣ್ಯ ಸ್ಥಳ ಪ್ರವಾಸಿ ತಾಣಗಳಿಗೆ ಭೇಟಿ ಮಾಡಿಸಿ ಮನಃಸಂತೋಷ ಪಡುತ್ತಿರುವ ಡಿ. ಕೃಷ್ಣಕುಮಾರ್ ಮತ್ತು ಅವರಮ್ಮ ಚೂಡಾ ರತ್ನಮ್ಮ ಮಂಜಿನ ನಗರಿ ಮಡಿಕೇರಿಗೆಂದು ಭೇಟಿ ನೀಡಿದರು.
ಮೂಲತಃ ಮೈಸೂರಿನವರಾದ ಕೃಷ್ಣ ಕುಮಾರ್ ಅವರು ತಮ್ಮಮ್ಮನೊಂದಿಗೆ 2018 ರ ಜ.16 ರಂದು ಆರಂಭಿಸಿರುವ ಪ್ರವಾಸ ಇಂದಿಗೂ ಮುಂದುವರೆದಿದೆ. ಇವರು ಇಲ್ಲಿಯವರೆಗೆ ಭಾರತದ ವಿವಿಧ ರಾಜ್ಯಗಳು,ನೆರೆಯ ನೇಪಾಳ, ಬೂತಾನ್, ಮ್ಯಾನ್ಮಾರ್ ದೇಶ ಸೇರಿದಂತೆ ಒಂದು ಲಕ್ಷ ಕಿ.ಮೀ.ಗೂ ಹೆಚ್ಚಿನ ದೂರವನ್ನು ಕ್ರಮಿಸಿ, ಅಮ್ಮನಿಚ್ಛೆಯ ಪ್ರದೇಶಗಳನ್ನು, ತೀರ್ಥ ಕ್ಷೇತ್ರಗಳ ದರ್ಶನವನ್ನು ಅವರಿಗೆ ಮಾಡಿಸಿದ್ದಾರೆ.
ಅಪ್ಪ ದಕ್ಷಿಣಾ ಮೂರ್ತಿಗಳು ಕಾಲವಾದ ಬಳಿಕ, ಅವರು ಕೊಡಿಸಿದ್ದ ‘ಬಜಾಜ್ ಚೇತಕ್’ ಸ್ಕೂಟರ್‌ನಲ್ಲೆ ತಂದೆಯನ್ನು ಕಾಣುತ್ತಿದ್ದೇನೆ.
ಇದರಿಂದಾಗಿ ಸ್ಕೂಟರ್‌ನಲ್ಲಿ ಅಮ್ಮನೊಂದಿಗಿನ ಪ್ರವಾಸ ಅಂದರೆ ಅದು ಅಪ್ಪನನ್ನು ಒಳಗೊಂಡ ನಮ್ಮ ಕುಟುಂಬದ ಪ್ರವಾಸವೆಂದೆ ಭಾವಿಸಿದ್ದೇನೆ ಎನ್ನುವ ಕೃಷ್ಣ ಕುಮಾರ್, ಈ ಹಿಂದೆ ಕಾರ್ಪೋರೇಟ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದವರು. ಬಳಿಕ ಸ್ವಯಂ ನಿವೃತ್ತಿಯನ್ನು ಪಡೆದು, ತಾಯಿಯ ಸಂತೋಷದಲ್ಲಿ ತಮ್ಮ ಸಂತೋಷವನನ್ನು ಕಾಣುತ್ತ ಊರಿಂದೂರಿಗೆ, ರಾಜ್ಯದಿಂದ ರಾಜ್ಯಕ್ಕೆ, ದೇಶದಿಂದ ದೇಶಕ್ಕೆ ಪಯಣಿಸುತ್ತ ಅಲ್ಲಿನ ಸುಂದರ ತಾಣಗಳನ್ನು, ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತಾ ಸಾಗಿರುವುದೊಂದು ಅಚ್ಚರಿ.
ಒಂದು ಮಗ ಅಮ್ಮನ ಬಳಿ ಪ್ರಶ್ನೆ ಮಾಡಿದ್ದರಂತೆ, ಅಮ್ಮಾ ಯಾವ ಯಾವ ಊರು ನೋಡಿದ್ದೀಯಾ ಎಂದು ಕೇಳಿದಾಗ , ಅಮ್ಮ ನಾನು ಅಡುಗೆ ಮನೆ ಬಿಟ್ಟು ಬೇರೆಲ್ಲೂ ಹೋಗಿಲ್ಲ ಅಂದರಂತೆ , ಅದಕ್ಕೆ ಮಗ ಈ ನಿರ್ಧಾರ ತೆಗೆದುಕೊಂಡರಂತೆ













