ನ್ಯೂಸ್ ನಾಟೌಟ್ :
ಸಂಪಾಜೆ ಗ್ರಾಮದ ಕಲ್ಲುಗುಂಡಿ ಯಲ್ಲಿ ನಡೆದ ಘಟನೆ ಮನಸ್ಸಿಗೆ ತುಂಬಾ ನೋವು ತಂದಿದೆ.
ತನ್ನ ದೇಹದ ಒಂದೋ ಅದಕ್ಕಿಂತ ಹೆಚ್ಚೋ ಅಂಗಾಗದ ಭಾಗವನ್ನು ಅಥವಾ ಅದರ ಸ್ವಾಧೀನವನ್ನು ಕಳಕೊಂಡು ಜೀವನವಿಡೀ ನೋವನ್ನು ಅನುಭವಿಸುತ್ತಿರುವ ವಿಕಲಚೇತನ ಸಮುದಾಯಕ್ಕೆ ಸಮಾಜ ಸಾರ್ವಜನಿಕ ವಲಯದಲ್ಲಿ ಉತ್ತಮ ಅವಕಾಶ ಕೊಟ್ಟು ಸಮಾಜದ ಮುಖ್ಯ ವಾಹಿನಿಗೆ ತರಬೇಕೇ ಹೊರತು, ಅವರಿಗೆ ಅನ್ಯಾಯ ಮಾಡೋದು, ಅವರ ಮನಸ್ಸಿಗೆ ನೋವನ್ನುಂಟುಮಾಡೋದು, ಹಲ್ಲೆ ಮಾಡೋದು ಸರಿಯಲ್ಲ. ಅವರಿಗೇ ಇಂದು ಸರಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಪ್ರತ್ಯೇಕ ಇಲಾಖೆ ಕಾರ್ಯನಿರ್ವಹಿಸುತ್ತಿದೆ.
ಹಲವು ಸಂಘ ಸಂಸ್ಥೆಗಳು, ಪುನರ್ವಸತಿ ಕಾರ್ಯಕರ್ತರು, ವಿವಿಧ ಇಲಾಖೆಗಳು ವಿಕಲಚೇತನರ ಶ್ರೇಯೋಭಿವೃದ್ಧಿಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಪ್ರತ್ಯೇಕ ಅಧಿನಿಯಮ ಸ್ಥಾಪನೆಯಾಗಿದೆ, ವಿಕಲಚೇತನರ ಹಕ್ಕುಗಳ ಕಾಯ್ದೆ 2016 ರ ಅಡಿಯಲ್ಲಿ ಹಲವು ಪ್ರಮುಖ ವಿಚಾರಗಳು ಅಡಕವಾಗಿದೆ.
ಆರೋಪಿಗಳಿಗೆ ಇದರಡಿಯಲ್ಲಿ ಸೂಕ್ತ ಕ್ರಮ ಆಗಲಿದೆ, ಹಲ್ಲೆಗೊಳಗಾದ ವ್ಯಕ್ತಿಗೆ ಸೂಕ್ತ ನ್ಯಾಯ ಸಿಗಲಿದೆ.
ಇನ್ನು ಮುಂದೆ ಯಾವುದೇ ವಿಕಲ ಚೇತನ ವ್ಯಕ್ತಿಗೆ ಸಮುದಾಯಕ್ಕೆ ಯಾವುದೇ ತೊಂದರೆಯಾಗದಿರಲಿ ಎಂದು ಮಾಜಿ ನೋಡೆಲ್ ಅಧಿಕಾರಿ ಸುಬ್ರಮಣಿ ತಿಳಿಸಿದ್ದಾರೆ.













