ನ್ಯೂಸ್ ನಾಟೌಟ್ : ಐತಿಹಾಸಿಕ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾದ ಚಿನ್ನಾಭರಣಗಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಂಪಿ ಪುರಾತತ್ವ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತಂಡ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಹಂಪಿ ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಸೈಜೇಶ್ವರ ಅವರ ನೇತೃತ್ವದ ತಂಡ ಬಂಗಾರ ಪತ್ತೆಯಾದ ಸ್ಥಳವನ್ನು ಪರಿಶೀಲಿಸಿತು
ಈ ವೇಳೆ ಮಾತನಾಡಿದ ಸೈಜೇಶ್ವರ ಅವರು,” 1962ರ ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಹಾಗೂ ಪುರಾತತ್ವ ನಿವೇಶನಗಳು ಮತ್ತು ಅವಶೇಷಗಳ ನಿಯಮಗಳ ಪ್ರಕಾರ 10 ರೂ ಗಿಂತ ಹೆಚ್ಚಿನ ಮೌಲ್ಯದ ಯಾವುದೇ ವಸ್ತು ಭೂಮಿಯೊಳಗೆ ಸಿಕ್ಕರೂ ಅದು ಸರಕಾರಕ್ಕೆ ಸೇರುತ್ತದೆ.
ಭೂಮಿಯ ಒಂದು ಅಡಿ ಆಳದಲ್ಲಿಏನೇ ಸಿಕ್ಕರೂ ಅದು ‘ನಿಧಿ’ ಎಂದೇ ಪರಿಗಣಿಸಲ್ಪಡುತ್ತದೆ” ಎಂದು ಸ್ಪಷ್ಟಪಡಿಸಿದರು. ಜಿಲ್ಲಾಡಳಿತಕ್ಕೆ ಈ ಬಗ್ಗೆ ವರದಿ ಸಲ್ಲಿಸಲಾಗುವುದು. ಕಾನೂನಿನ ಪ್ರಕಾರ, ಸಿಕ್ಕ ನಿಧಿಯ ಒಟ್ಟು ಮೊತ್ತದಲ್ಲಿ5ನೇ ಒಂದು ಭಾಗದಷ್ಟು (ಶೇ. 20) ಹಣವನ್ನು ನಿಧಿ ಪತ್ತೆಯಾದ ಕುಟುಂಬಕ್ಕೆ ನೀಡಲಾಗುವುದು” ಎಂದರು.