ನ್ಯೂಸ್ ನಾಟೌಟ್ : ವಯಸ್ಸು ಆಗುತ್ತಿದ್ದಂತೆ ಅಜ್ಜ, ಅಜ್ಜಿರನ್ನ ಅಥವಾ ತಂದೆ, ತಾಯಿರನ್ನ ಮಕ್ಕಳು, ಮೊಮ್ಮಕ್ಕಳು ಮೂಲೆ ಗುಂಪು ಮಾಡಿ ಬಿಡುತ್ತಾರೆ. ಆದರೆ ಇಲ್ಲೊಬ್ಬ ಮೊಮ್ಮಗಳು ತನ್ನ ತಾತಾ, ಅಜ್ಜಿನ ವಿಶೇಷ ಸ್ಥಳಕ್ಕೆ ಕರೆದೊಯ್ದು ಆಸೆಯನ್ನು ಈಡೇರಿಸಿದ್ದಾರೆ.
ಮೊದಲ ಬಾರಿಗೆ ಅಜ್ಜ, ಅಜ್ಜಿ ಇಬ್ಬರು ಸಮುದ್ರವನ್ನು ನೋಡಿ ಸಂತಸ ಪಟ್ಟಿದ್ದಾರೆ. ಹಳ್ಳಿಯಲ್ಲಿ ಇದ್ದ ಈ ವೃದ್ಧ ದಂಪತಿ ಅವರ ಇಡೀ ಜೀವನದಲ್ಲಿ ಒಮ್ಮೆಯೂ ಪ್ರವಾಸ ಮಾಡಿರಲಿಲ್ವಂತೆ. ಇನ್ನು ಸಾಗರದ ಕಲ್ಪನೆಯು ಅಂತೂ ಇರುವುದೇ ಇಲ್ಲ. ಇದನ್ನು ಸ್ವತಹ ಅವರ ಮೊಮ್ಮಗಳೇ ರಿವೀಲ್ ಮಾಡಿದ್ದಾರೆ. ಅಜ್ಜ, ಅಜ್ಜಿಯ ಆಸೆಯನ್ನು ಬಲವಾಗಿ ಪರಿಗಣಿಸಿದ ಮೊಮ್ಮಗಳು ಸರ್ಪ್ರೈಸ್ ರೀತಿ ಅವರನ್ನು ಸಾಗರಕ್ಕೆ ಕರೆದುಕೊಂಡು ಹೋಗಿದ್ದಾರೆ.
ಸಮುದ್ರಕ್ಕೆ ಹೋಗುತ್ತಿದ್ದಂತೆ ಅಜ್ಜ, ಅಜ್ಜಿ ಇಬ್ಬರೂ ನೀರನ್ನು ಮುಟ್ಟಿ ನಮಸ್ಕಾರ ಮಾಡಿದ್ದಾರೆ. ಸಂತಸ ಪಟ್ಟಿದ್ದಾರೆ. ಸಮುದ್ರದ ಮರಳು, ನೀರಿನಲ್ಲಿ ಒಂದೆರಡು ಹೆಜ್ಜೆ ಹಾಕಿ ತಮ್ಮ ಬಹುದಿನಗಳ ಆಸೆ ನನಸಾಯಿತು ಎಂದು ಖುಷಿ ಪಟ್ಟಿದ್ದಾರೆ. ಕೆಲವು ಕ್ಷಣ ಸಮುದ್ರದ ನೀರನ್ನು ನೋಡಿ ಜೀವನ ಧನ್ಯವಾಯಿತು ಎಂದುಕೊಂಡಿದ್ದಾರೆ.













