37.4 C
Sullia
Sunday, March 8, 2026

ಅಯೋಧ್ಯೆಯ ರಾಮನ ದರ್ಶನಕ್ಕೆ 450 ಕಿ.ಮೀ ಸ್ಕೇಟಿಂಗ್ ಮಾಡಿದ 9 ವರ್ಷದ ಬಾಲಕಿ

ನ್ಯೂಸ್ ನಾಟೌಟ್ : ಸಾಧನೆ ಅಂದ್ರೆ ಇದು..ನಿರಂತರ ಶ್ರಮ‌, ಶ್ರದ್ಧೆ ಇದ್ದಾಗ ಮಾತ್ರ ನಾವು ಅಂದುಕೊಂಡಿದ್ದು ನಿಜವಾಗುತ್ತೆ ಅನ್ನೊದಕ್ಕೆ ಈ ಘಟನೆ ಸಾಕ್ಷಿ…


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಉತ್ತರ ಪ್ರದೇಶದಲ್ಲಿ ತೀವ್ರವಾದ ಚಳಿಯಿದೆ. ಈ ಚಳಿಯಲ್ಲೂ ಫಿರೋಜಾಬಾದ್​​ನಿಂದ 450 ಕಿ.ಮೀ ದೂರದವರೆಗೆ ಸ್ಕೇಟಿಂಗ್ ಮಾಡಿ 9 ವರ್ಷದ ಬಾಲಕಿ ವಂಶಿಕಾ ಯಾದವ್ ಎಂಬಾಕೆ ಅಯೋಧ್ಯೆಯ ರಾಮ ಲಲ್ಲಾನ ದರ್ಶನ ಪಡೆದಿದ್ದಾಳೆ. ಈ ಮೂಲಕ 9 ವರ್ಷದ ವಂಶಿಕಾ ಭಗವಾನ್ ರಾಮನ ಮೇಲಿನ ತನ್ನ ಭಕ್ತಿಯನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಜನರು ಈ ಬಾಲಕಿಯ ಭಕ್ತಿಯನ್ನು ಮೆಚ್ಚುತ್ತಿದ್ದಾರೆ.

ಜನವರಿ 3ರಂದು ಫಿರೋಜಾಬಾದ್‌ನಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದಳು. ಸುಮಾರು 450 ಕಿಲೋಮೀಟರ್ ದೂರಕ್ಕೆ 5 ದಿನಗಳ ಕಾಲ ಸ್ಕೇಟಿಂಗ್ ಮಾಡಿದ ನಂತರ ವಂಶಿಕಾ ಅಯೋಧ್ಯೆಯನ್ನು ತಲುಪಿದರು. ವಂಶಿಕಾ ಸ್ಕೇಟಿಂಗ್ ಮಾಡುತ್ತಿದ್ದಾಗ ಆಕೆಯ ಪ್ರಯಾಣಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಆಕೆಯ ತಂದೆ ಮತ್ತು ಚಿಕ್ಕಪ್ಪ ಕಾರಿನಲ್ಲಿ ಆಕೆಯನ್ನು ಹಿಂಬಾಲಿಸಿದರು. ಕೊನೆಗೂ ಆಕೆ ಯಶಸ್ವಿಯಾಗಿ ಗುರಿ ಮುಟ್ಟಿ ಬಾಲರಾಮನ ದರ್ಶನ ಪಡೆದಿದ್ದಾಳೆ

Related Articles

LEAVE A REPLY

Please enter your comment!
Please enter your name here

Latest Articles