37.4 C
Sullia
Sunday, March 8, 2026

ಗಲಾಟೆ ಬೆನ್ನಲ್ಲೇ ಬಳ್ಳಾರಿಯಲ್ಲಿ ಬ್ಯಾನರ್​​ ಹಾವಳಿಗೆ ಕಡಿವಾಣ​: ಜನಾರ್ದನ ರೆಡ್ಡಿ ಬರ್ತಡೇಗಿಲ್ಲ ಬ್ಯಾನರ್​!

ನ್ಯೂಸ್ ನಾಟೌಟ್ : ಬ್ಯಾನರ್​​ ವಿಚಾರಕ್ಕೆ ಶಾಸಕರಾದ ಜನಾರ್ದನ ರೆಡ್ಡಿ ಮತ್ತು ಭರತ್​​ ರೆಡ್ಡಿ ಬೆಂಬಲಿಗರ ನಡುವೆ ಮಾರಾಮಾರಿ ವೇಳೆ ಓರ್ವ ಕಾಂಗ್ರೆಸ್ ಕಾರ್ಯಕರ್ತ ಮೃತಟಪಟ್ಟ ಪ್ರಕರಣ ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಭಾರೀ ಸದ್ದು ಮಾಡಿದೆ. ಈ ಬೆನ್ನಲ್ಲೇ ಬಳ್ಳಾರಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಂದ್ದು, ಬ್ಯಾನರ್​​ ವಿಚಾರವಾಗಿ ಕಠಿಣ ಕ್ರಮಗಳ ಜಾರಿಗೆ ಮುಂದಾಗಿದೆ. ಬಳ್ಳಾರಿಯ ಗಲಭೆ ಬಳಿಕ ಶಾಂತಿಭಂಗ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದ್ದು, ನಗರದಲ್ಲಿ ಎಲ್ಲೆಂದರಲ್ಲಿ ಬ್ಯಾನರ್​ ಅಳವಡಿಕೆಗೆ ನಿಷೇಧ ಹೇರಲಾಗಿದೆ. ನಿಯಮ ಮೀರಿದ್ರೆ ದಂಡ ಬೀಳಲಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಬಳ್ಳಾರಿ ನಗರದಲ್ಲಿ ಅನುಮತಿ ಇಲ್ಲದೆ ಬ್ಯಾನರ್, ಹೋಲ್ಡಿಂಗ್ಸ್, ಫ್ಲೆಕ್ಸ್​​​ ಅಥವಾ ಪೋಸ್ಟರ್ ಅಳವಡಿಕೆಗೆ ಜಿಲ್ಲಾಡಳಿತ ನಿಷೇಧ ವಿಧಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಇವುಗಳ ಅವಳವಡಿಕೆಗೆ ಸ್ಥಳೀಯ ಆಡಳಿತ ಸಂಸ್ಥೆಯ ಪೂರ್ವಾನುಮತಿ ಕಡ್ಡಾಯಗೊಳಿಸಲಾಗಿದೆ. ನಿಯಮ ಜಾರಿ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದ್ರೆ ಅಂತಹ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳೋದಾಗಿ ತಿಳಿಸಲಾಗಿದೆ. ಅನಧಿಕೃತ ಜಾಹೀರಾತು ಮತ್ತು ಬ್ಯಾನರ್​ಗಳ ಮೇಲೆ ಪೊಲೀಸ್ ಇಲಾಖೆ ಇನ್ಮುಂದೆ ನಿಗಾ ಇಡಲಿದ್ದು, ಬ್ಯಾನರ್​​ ವಿಚಾರವಾಗಿಯೇ ಗಲಾಟೆ ನಡೆದು ಜಿಲ್ಲೆ ಪ್ರಕ್ಷುಬ್ಧಗೊಂಡಿದ್ದ ಕಾರಣ ಕಠಿಣ ನಿರ್ಧಾರಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ.

ಜನಾರ್ದನ ರೆಡ್ಡಿ ಬರ್ತಡೇಗಿಲ್ಲ ಬ್ಯಾನರ್​!

ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಇಂದು ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಬರ್ತ್​​ ಡೇ ಸಂದರ್ಭ ಅಥವಾ ಯಾವುದೇ ಕಾರ್ಯಕ್ರಮ ಇದ್ದಾಗ ಈ ಹಿಂದೆ ಬಳ್ಳಾರಿಯಲ್ಲಿ ಬ್ಯಾನರ್​​ಗಳು ರಾರಾಜಿಸುತ್ತಿದ್ದವು. ಆದ್ರೆ ಇದೇ ಮೊದಲ ಬಾರಿಗೆ ಯಾವುದೇ ಬ್ಯಾನರ್​​ ಇಲ್ಲದೆ ಗಣಿದಣಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಾಯಕನ ಜನ್ಮ ದಿನವನ್ನು ಸರಳವಾಗಿ ಆಚರಿಸಲು ಬೆಂಬಲಿಗರು ಕೂಡ ನಿರ್ಧರಿಸಿದ್ದು, ಅದ್ಧೂರಿ ಆಚರಣೆ ಮತ್ತು ಕೇಕ್​​ ಕಟ್ಟಿಂಗ್​​ ಕೂಡ ಬೇಡ ಎಂದು ಜನಾರ್ದನ ರೆಡ್ಡಿ ಬೆಂಬಲಿಗರಿಗೆ ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೇವಲ ಶುಭಾಶಯಕ್ಕೆ ಜನಾರ್ದನ ರೆಡ್ಡಿ ಬರ್ತ್​​ ಡೇ ಸೀಮಿತವಾಗಿರಲಿದೆ.

Related Articles

LEAVE A REPLY

Please enter your comment!
Please enter your name here

Latest Articles