37.4 C
Sullia
Sunday, March 8, 2026

ಕೊಡಗು: ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ: ಕಾರಣವೇನು? ಇಲ್ಲಿದೆ ಮಾಹಿತಿ

ನ್ಯೂಸ್ ನಾಟೌಟ್ : ಕರ್ನಾಟಕದ ಕಾಶ್ಮೀರ ಎಂದೇ ಕರೆಸಿಕೊಳ್ಳುವ ಕೊಡಗು ಪ್ರವಾಸಿಗರ ನೆಚ್ಚಿನ ತಾಣ. ಚಳಿಗಾಲ ಬಂತಂದ್ರೆ ಸಾಕು ರಾಜ್ಯ ಮಾತ್ರವಲ್ಲದೆ ದೇಶ-ವಿದೇಶಗಳ ಪ್ರವಾಸಿಗರೂ ಇಲ್ಲಿಗೆ ಭೇಟಿ ನೀಡ್ತಾರೆ. ಪ್ರಕೃತಿ ಸೌಂದರ್ಯದ ಜೊತೆ ಇಲ್ಲಿನ ಚಳಿಯ ವಾತಾವರಣವನ್ನು ಎಂಜಾಯ್​​ ಮಾಡ್ತಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಆದ್ರೆ 2025 ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಲಾಭಕ್ಕಿಂತ ನಷ್ಟವನ್ನೇ ಹೆಚ್ಚಾಗಿ ತಂದಿದೆಯಂತೆ.2025ರಲ್ಲಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಸುಮಾರು 2 ಲಕ್ಷ ಇಳಿಕೆಯಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಂಕಿ-ಅಂಶ ಮಾಹಿತಿ ನೀಡಿದ್ದು, ವಾರ್ಷಿಕವಾಗಿ ಪ್ರವಾಸಿಗರ ಸಂಖ್ಯೆ 18 ಲಕ್ಷವನ್ನು ದಾಟಿಲ್ಲ ಎನ್ನಲಾಗಿದೆ. ಮಡಿಕೇರಿಯಲ್ಲಿ ನಿರ್ಮಿಸಲಾಗಿರೋ ಕೂರ್ಗ್ ವಿಲೇಜ್, ನೆಹರು ಮಂಠಪದಂತಹ ತಾಣಗಳುಕೂಡ ಪ್ರವಾಸಿಗರ ಆಕರ್ಷಿಸುವಲ್ಲಿ ವಿಫಲವಾಗಿವೆ ಎನ್ನಾಗಿದೆ.

ನಿರಂತರ ಸರ್ಕಾರಿ ರಜೆಗಳಿದ್ದಾಗ ಜಿಲ್ಲೆಯ ಹೋಮ್​ ಸ್ಟೇ, ರೆಸಾರ್ಟ್​ಗಳು ಬುಕಿಂಗ್ ಆಗಿರುತ್ತವೆ. ಆದ್ರೆ ಕಳೆದ ವರ್ಷ ಮೇ ತಿಂಗಳಲ್ಲಿ ಶುರುವಾಗಿದ್ದ ಮಳೆ ಬಹುತೇಕ ನವೆಂಬರ್ ಅಂತ್ಯದವರೆಗೂ ಸುರಿದಿದೆ. ಇದೂ ಕೂಡ ಪ್ರವಾಸಿಗರು ಜಿಲ್ಲೆಗೆ ಆಗಮಿಸಲು ಹಿಂದೇಟು ಹಾಕಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದರ ಹಿಂದಿನ ವರ್ಷ ಸಂಭವಿಸಿದ ವಯನಾಡು ದುರಂತ ಕೂಡ ಕೊಡಗು ಜಿಲ್ಲೆಗೆ ಮಳೆಗಾಲದಲ್ಲಿ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯ ಮೇಲೆ ಪರಿಣಾಮ ಬೀರಿತ್ತು. ಹೀಗಾಗಿ 2026ರಲ್ಲಾದರೂ ಜಿಲ್ಲೆಯ ಪ್ರವಾಸೋದ್ಯಮ ತಮ್ಮ ಕೈಹಿಡಿಯಬಹುದು ಎಂದು ಇದೇ ಉದ್ಯಮವನ್ನು ನಂಬಿಕೊಂಡ ಸಾವಿರಾರು ಕುಟುಂಬಗಳು ಕನಸು ಕಂಡಿವೆ.

Related Articles

LEAVE A REPLY

Please enter your comment!
Please enter your name here

Latest Articles