ನ್ಯೂಸ್ ನಾಟೌಟ್ : ಖ್ಯಾತ ಸರಳ ಸಜ್ಜನಿಕೆಯ ಸಮಾಜ ಸೇವಕ ರವಿ ಕಟಪಾಡಿ ಸುಳ್ಯದ ಹೋಟೆಲ್ ಮಮತಾದಲ್ಲಿ ಇಂದು(ಮೇ 26) ಊಟ ಸವಿದರು.ಹಲವಾರು ಬಡವರ ಪಾಲಿನ ಆಶಾ ಕಿರಣ ಇಂದಿಗೂ ಸರಳತೆಯಲ್ಲಿ ಬದುಕು ಸಾಗಿಸುತ್ತಿರುವ ರವಿ ಕಟಪಾಡಿ ಹಲವರಿಗೆ ಸ್ಪೂರ್ತಿಯಾಗಿದ್ದಾರೆ.
ರವಿ ಕಟಪಾಡಿ ಪುರಾಣದಿಂದ ಜಾನಪದದವರೆಗೆ ಹಲವು ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ವಿವಿಧ ಉತ್ಸವಗಳಲ್ಲಿ ಪ್ರದರ್ಶನ ನೀಡುವ ಕಲಾವಿದರು. ಕಳೆದ ಕೆಲವು ವರ್ಷಗಳಿಂದ ವಿವಿಧ ಜೀವಿಗಳಂತೆ ವೇಷಧರಿಸಿ ಜನರನ್ನು ರಂಜಿಸಲು ಮತ್ತು ಅಗತ್ಯವಿರುವವರ ಆರೋಗ್ಯಕ್ಕಾಗಿ ಪಾವತಿಸಲು ಹಣವನ್ನು ಸಂಗ್ರಹಿಸಿ ಸಮಾಜ ಸೇವಕರಾಗಿ ದುಡಿಯುತ್ತಿದ್ದಾರೆ.
2013 ರಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡಲು ಹಣವನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಕಳೆದ ವರ್ಷಗಳಲ್ಲಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗಾಗಿ 50 ಲಕ್ಷ ರೂ. ವರೆಗೆ ಸಂಗ್ರಹಿಸಿ ರವಿ ಈ ಹಣವನ್ನು ಹೃದ್ರೋಗ, ಕ್ಯಾನ್ಸರ್, ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಮತ್ತು ಯಾವುದೇ ರೀತಿಯ ಚರ್ಮ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ಆರ್ಥಿಕ ನೆರವು ನೀಡಲು ಬಳಸಿದ್ದಾರೆ ಎಂಬುದು ಶ್ಲಾಘನೀಯ, ಅಂತಹ ನಿಸ್ವಾರ್ಥಿ ಸಮಾಜ ಸೇವಕ ಇಂದು ಸುಳ್ಯದಲ್ಲಿ ಜನರ ಜೊತೆ ಬೆರೆತು ಸ್ಪೂರ್ತಿಯಾದರು.