ನ್ಯೂಸ್ ನಾಟೌಟ್ : ಸುಳ್ಯ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ವರ್ಷಾವಧಿ ಜಾತ್ರೋತ್ಸವ ಪ್ರಯುಕ್ತ ಇಂದು ಜ. 9ರಂದು ಪ್ರಪ್ರಥಮ ಬಾರಿಗೆ ದೇವಳದ ಪ್ರಾಂಗಣದಲ್ಲಿ ಶ್ರೀ ಚೆನ್ನಕೇಶವ ದೇವರ ಪುಷ್ಪ ರಥೋತ್ಸವ ನಡೆಯಲಿದೆ.

ರಾತ್ರಿ9 ಕ್ಕೆ ಶ್ರೀ ಚೆನ್ನಕೇಶವ ದೇವರ ಪ್ರಾಂಗಣದಲ್ಲಿ ಬ್ರಹ್ಮಶ್ರೀ ನೀಲೇಶ್ವರ ಆರೋತ್ ಕೆ. ಯು ಪದ್ಮನಾಭ ತಂತ್ರಿಯವರ ಮಾರ್ಗದರ್ಶನದಲ್ಲಿ ಪುಷ್ಪ ರಥೋತ್ಸವ ನೆರವೇರಲಿದೆ. ಈ ಪ್ರಯುಕ್ತ ದೇವಳದಲ್ಲಿ ಜ. 9ರಂದು ಮಧ್ಯಾಹ್ನ ಡಾ. ಕೆ.ವಿ. ಚಿದಾನಂದ ಅವರಿಂದ ಅನ್ನ ಸಂತರ್ಪಣೆ ನಡೆಯಿತು. ನಾಡಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಳದ ಆಡಳಿತ ಮಂಡಳಿ ವಿನಂತಿಸಿದ್ದಾರೆ.













