37.4 C
Sullia
Sunday, March 8, 2026

ಸೊಸೆ ಕಾಟಕ್ಕೆ ಅತ್ತೆ ಆತ್ಮಹತ್ಯೆ? ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ನ್ಯೂಸ್ ನಾಟೌಟ್ : ಅತ್ತೆ ಕಾಟಕ್ಕೆ ಸೊಸೆ ಮನೆಬಿಟ್ಟು ಹೋಗೋದು, ಗಂಡನಿಂದಲೇ ದೂರವಾಗೋ ಘಟನೆಗಳು ಮಾಮೂಲಾಗಿ ನಡೆಯುತ್ತಲೇ ಇರುತ್ತವೆ. ಆದ್ರೆ ಕಲ್ಪತರು ನಾಡು ತುಮಕೂರಲ್ಲಿ ಈ ಕೇಸ್​ ಉಲ್ಟಾ ಆಗಿದೆ. ಸೊಸೆ ಕಾಟಕ್ಕೆ ಬೇಸೆತ್ತು ಅತ್ತೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.  ತುಮಕೂರು ಗುಬ್ಬಿ ತಾಲೂಕಿನ ಕಾರೇಕುರ್ಚಿ ಗ್ರಾಮದಲ್ಲಿ ಘಟನೆ ನಡೆದಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಭ್ರಮರಾಂಬಿಕೆ (60) ಶವ ಪತ್ತೆಯಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಸೊಸೆ ಕಾವ್ಯಶ್ರೀ ಪ್ರತ್ಯೇಕವಾಗಿ ಉಳಿಯಲು ಬಯಸಿದ್ದಳು. ಇದೇ ಕಾರಣಕ್ಕೆ ಅಡುಗೆ ಸೇರಿ ಎಲ್ಲವನ್ನೂ ಪ್ರತ್ಯೇಕವಾಗಿ ಮಾಡಿಕೊಳ್ಳುತ್ತಿದ್ದಳು. ಅಲ್ಲದೆ ಈ ನಡುವೆ ಗಂಡನನ್ನು ಬೆಂಗಳೂರಿಗೆ ಕರೆದೊಯ್ಯುವ ಬಗ್ಗೆಯೂ ಮಾತನಾಡುತ್ತಿದ್ದಳು. ಹೀಗಾಗಿ ಎಲ್ಲಿ ಮಗನನ್ನ ಸೊಸೆ ತನ್ನಿಂದ ದೂರ ಮಾಡ್ತಾಳೋ ಎನ್ನುವ ಭಯಕ್ಕೆ ಅತ್ತೆ ಭ್ರಮರಾಂಬಿಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ನಿನ್ನೆ ಬೆಳಗ್ಗೆ ಅನುಮಾನಾಸ್ಪದ ಸ್ಥಿತಿಯಲ್ಲಿ ಭ್ರಮರಾಂಬಿಕೆ ಶವ ಫಾರ್ಮ್​ಹೌಸ್​​ನಿಂದ 200 ಮೀಟರ್ ದೂರವಿರುವ ಪಂಪ್​ಹೌಸ್​​ನಲ್ಲಿ ಪತ್ತೆಯಾಗಿದೆ. ತಾಯಿ ನೇಣುಬಿಗಿದ ಸ್ಥಿಯಲ್ಲಿರೋದನ್ನು ಕಂಡ ಮಗ ಮನುಕುಮಾರ್ ಶವ ಕೆಳಗಿಳಿಸಿದ್ದ. ಬಳಿಕ ಚೇಳೂರು ಪೊಲೀಸರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ

ಆತ್ಮಹತ್ಯೆಗೆ ಪ್ರೇರಣೆ ನೀಡಿರುವ ಆರೋಪದಡಿ ಸೊಸೆ ಕಾವ್ಯಶ್ರೀ ವಿರುದ್ಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

Latest Articles