21.6 C
Sullia
Sunday, March 8, 2026

ಸುಳ್ಯ ಶಾಸಕರ ಜಾತಿಯನ್ನು ನಾವೆಂದೂ ನೋಡಿಲ್ಲ, ಆ ಮೂರು ಕಾಸಿನವ ಯಾರೆಂದು ಬಹಿರಂಗವಾಗಲಿ’ ಉದ್ಯಮಿ ರಂಜಿತ್ ಪೂಜಾರಿ ಖಡಕ್ ಹೇಳಿಕೆ

ನ್ಯೂಸ್ ನಾಟೌಟ್: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರಿಗೆ ಜಾಲತಾಣದಲ್ಲಿ ಬಿಲ್ಲವ ಸಂದೇಶ್ ಅನ್ನುವ ಪುಟದಿಂದ ಶ್ರದ್ದಾಂಜಲಿ ಸಲ್ಲಿಸಿದ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಬಗ್ಗೆ ಸುಳ್ಯದ ಬಿಲ್ಲವ ಸಮುದಾಯದ ರಂಜಿತ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕ ವ್ಯಕ್ತಿ ಬಿಲ್ಲವ ಎಂದು ಬರೆದುಕೊಂಡು ಬಿಲ್ಲವ ಸಮುದಾಯವನ್ನು ಬೇರೆ ಜಾತಿಯ ಜೊತೆಗೆ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾನೆ. ಸುಳ್ಯ ಶಾಸಕರ ಜಾತಿಯನ್ನು ನಾವೆಂದೂ ನೋಡಿಲ್ಲ. ಅವರು ನಮ್ಮ ಹಿಂದೂ ಸಮಾಜದ ಹೆಮ್ಮೆಯ ಮಹಿಳೆ. ಇಡೀ ಬಿಲ್ಲವ ಸಮುದಾಯ ಸಹಿತ ಹಿಂದೂ ಸಮಾಜ ಭಾಗೀರಥಿ ಅಕ್ಕನ ಜೊತೆಗಿದೆ. ಆ ಮೂರು ಕಾಸಿನವ ಯಾರೆಂದು ಮೊದಲು ಬಹಿರಂಗವಾಗಬೇಕು ಎಂದು ರಂಜಿತ್ ಪೂಜಾರಿ ಒತ್ತಾಯಿಸಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles