27.7 C
Sullia
Sunday, March 8, 2026

ಕಲ್ಲುಗುಂಡಿ: ಅನುಭವಿ ನ್ಯಾಯವಾದಿಗಳ ನೂತನ ಕಚೇರಿ ಉದ್ಘಾಟನೆ, ಹೊಸ ಕಚೇರಿಗೆ ಡೊಮ್ನಿಕ್ – ಯತೀಶ್

ನ್ಯೂಸ್ ನಾಟೌಟ್: ಕಳೆದ ಹಲವಾರು ವರ್ಷಗಳಿಂದ ವಕೀಲ ವೃತ್ತಿಯಲ್ಲಿ ತೊಡಗಿಕೊಂಡು ಜನರಿಗೆ ನ್ಯಾಯ ತೆಗೆದುಕೊಡುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಕಲ್ಲುಗುಂಡಿಯ ಅನುಭವಿ ನ್ಯಾಯವಾದಿಗಳಾಗಿರುವ ಡೊಮ್ನಿಕ್ ಹಾಗೂ ಯತೀಶ್ ಅವರ ನೂತನ ಕಚೇರಿ ಇತ್ತೀಚೆಗೆ ಕಲ್ಲುಗುಂಡಿಯ ಸಂಗಮ್ ಬಿಲ್ಡಿಂಗ್ ನಲ್ಲಿ ಉದ್ಘಾಟನೆಗೊಂಡಿದೆ. ಸಿಟಿ ಟವರ್ ನಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿತ್ತು. ಇದೀಗ ಹೊಸ ಕಟ್ಟಡಕ್ಕೆ ವರ್ಗಾವಣೆಗೊಂಡಿದೆ. ಸಂಪಾಜೆ ಹೊಲಿ ಟ್ರಿನಿಟಿ ಚರ್ಚ್ ಧರ್ಮ ಗುರುಗಳಾದ ಫಾದರ್ ಮನೋಜ್ ಆಶೀರ್ವಚನ ನೀಡಿದರು. ಕಲ್ಲುಗುಂಡಿ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚ್ ಧರ್ಮ ಗುರುಗಳಾದ ಫಾದರ್ ಪೌಲ್ ಕ್ರಾಸ್ತ ದೀಪ ಬೆಳಗಿಸಿ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಸರ್ಕಾರದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ನಿರ್ದೇಶಕ ಕೆ.ಪಿ. ಜಾನಿ, ಸುಳ್ಳ್ಯ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನದ ಸದಸ್ಯ ಜ್ಞಾನಶೀಲನ್, ಸಂಪಾಜೆ ಸರ್ವ ಕ್ರೈಸ್ತ ಸಮುದಾಯ ಸಂಘದ ಅಧ್ಯಕ್ಷ ಸಂತೋಷ್ ಕ್ರಾಸ್ತ, ಊರ ಮಹನೀಯರು, ಮಿತ್ರರು ಪಾಲ್ಗೊಂಡು ಶುಭ ಕೋರಿದರು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles