27.7 C
Sullia
Sunday, March 8, 2026

ಬೆಳ್ತಂಗಡಿ: 36 ವರ್ಷದಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ..!, ಕೊನೆಗೂ ಸಿಕ್ಕಿ ಬಿದ್ದ..!

ನ್ಯೂಸ್ ನಾಟೌಟ್: ಪೊಲೀಸರಿಂದ ತಪ್ಪಿಸಿಕೊಂಡು ಆರೋಪಿಗಳು ಹಲವಾರು ವರ್ಷ ಬಚ್ಚಿಟ್ಟುಕೊಳ್ಳುವವರ ಬಗ್ಗೆ ಕೇಳಿದ್ದೇವೆ. ಇಲ್ಲೊಬ್ಬ ಆರೋಪಿ ಬರೋಬ್ಬರಿ 36 ವರ್ಷದಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿಕೊಂಡು ತಪ್ಪಿಸಿಕೊಳ್ತಿದ್ದ. ಇದೀಗ ಆತನನ್ನು ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ. ಈತನ ಹೆಸರು ರವೀಂದ್ರ ಚಾರ್ಮಾಡಿ. ಬೆಳ್ತಂಗಡಿ ಪೊಲೀಸ್‌ ಠಾಣಾ ಅ.ಕ್ರ 68/1989 ಕಲಂ, 341,323,326 ಜೊತೆಗೆ 34 ಐಪಿಸಿ. CC No. 1720/1990 CR NO. Lpc 04/1992 ಪ್ರಕರಣದಲ್ಲಿ ಸುಮಾರು 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು ಕಾರ್ಕಳ ತಾಲೂಕಿನ ನಲ್ಲೂರು ಎಂಬಲ್ಲಿಂದ ದಸ್ತಗಿರಿ ಮಾಡಲಾಗಿದೆ. ಸದ್ಯ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles