27.7 C
Sullia
Sunday, March 8, 2026

ಮನೆ, ಅಂಗಡಿಗೆ ದೃಷ್ಠಿ ಆಗದಿರಲು ದಪ್ಪ ಕಣ್ಣಿನ ಮಹಿಳೆ ಪೋಸ್ಟರ್; ಯಾರೀಕೆ ಪತ್ತೆ ಹಚ್ಚಿದ ನೆಟ್ಟಿಗರು

ನ್ಯೂಸ್ ನಾಟೌಟ್ : ದೊಡ್ಡ ದೊಡ್ಡ ನಿರ್ಮಾಣ ಹಂತದ ಕಟ್ಟಡಗಳಲ್ಲಿ, ಸಾಮಾನ್ಯ ಅಂಗಡಿಯಲ್ಲಿ ದಪ್ಪ ದಪ್ಪ ಕಣ್ಬಿಟ್ಟ, ದೊಡ್ಡ ಕುಂಕುಮ ಬಿಂದಿ ಇಟ್ಟ ಮಹಿಳೆಯ ಫೋಟೋ ದೃಷ್ಟಿ ಗೊಂಬೆಯಂತೆ ನೇತಾಡುತ್ತಿರುತ್ತದೆ. ಕೋವಿಡ್‌ ಕಾಲದ ನಂತರ ಈ ಫೋಟೋ ಕಬ್ಬಿನಗದ್ದೆ, ಹೊಲ, ತರಕಾರಿ ಅಂಗಡಿಗಳಲ್ಲಿ ಕಾಣಿಸಿಕೊಳ್ಳುವುದು ಮಾಮೂಲಾಗಿದೆ. ಈ ಮಹಿಳೆ ಯಾರು ಎನ್ನುವುದನ್ನು ನೆಟ್ಟಿಗರು ಮತ್ತು ಎಕ್ಸ್‌ ಸಹಾಯದಿಂದ ಪತ್ತೆ ಹಚ್ಚಲಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ದಪ್ಪ ದಪ್ಪ ಕಣ್ಬಿಟ್ಟು ಹೆದರಿಸುವಂತೆ ನೋಡುವ ಈ ಮಹಿಳೆ ಹೆಸರು ನಿಹಾರಿಕಾ ರಾವ್. ಇವರು ಕರ್ನಾಟಕದ ಒಬ್ಬ ಯೂಟ್ಯೂಬರ್. 2023ರಲ್ಲಿ ಅವರ ಒಂದು ವಿಡಿಯೋದಲ್ಲಿನ ಅಚ್ಚರಿಗೊಂಡ ಮುಖಭಾವ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದಾಗಿ ಕೆಲವೆ ದಿನಕ್ಕೆ ಅವರ ಫೋಟೋ ಎಲ್ಲ ಕಡೆ ಸಂಚಲನ ಸೃಷ್ಟಿಸಿದೆ ಎಂದು ಶಾಂತಾನು ಗೋಯೆಲ್‌ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರು AI ತಂತ್ರಜ್ಞಾನ ಸಹಾಯದಿಂದ ಈ ಮಹಿಳೆಯ ಹಿನ್ನೆಲೆಯನ್ನು ಪತ್ತೆ ಹಚ್ಚಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles