27.7 C
Sullia
Sunday, March 8, 2026

ಸುಳ್ಯ ಬಿಜೆಪಿ ಶಾಸಕಿಗೆ ಸಾಮಾಜಿಕ ಜಾಲತಾಣದಲ್ಲಿ ಶ್ರದ್ದಾಂಜಲಿ ಸಲ್ಲಿಕೆ, ಕೆರಳಿದ ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ, ಪ್ರತಿಭಟನೆಯ ಎಚ್ಚರಿಕೆ

ನ್ಯೂಸ್ ನಾಟೌಟ್: ದಲಿತ ಸಮಾಜಕ್ಕೆ ಅವಮಾನ ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಂದೇಶ ಅನ್ನುವವರು ಹಾಕಿದ ಸಂದೇಶವನ್ನು ಕಟು ಪದಗಳಿಂದ ಟೀಕಿಸುತ್ತಿರುವುದಾಗಿ ಕೆರಳಿದ ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ತಿಳಿಸಿದ್ದಾರೆ. ದಲಿತರು ಕೂಡ ನಿಮ್ಮಂತೆ ಮನುಷ್ಯರು, ಆ ಸಮಾಜದ ಹೆಣ್ಣು ಮಗಳು ಶಾಸಕಿ ಆಗಿರುವುದು ಎಲ್ಲ ಮಹಿಳೆಯರಿಗೆ ಸಂದ ಗೌರವ, ಹೀಗಿರುವಾಗ ನಿಮ್ಮ ರಾಜಕೀಯ ತೆವಲಿಗೆ ದಲಿತ ಸಮಾಜದ ಹೆಣ್ಣು ಮಗಳನ್ನು ಕೀಳು ಭಾವನೆಯಲ್ಲಿ ಬಿಂಬಿಸಿ ರಾಷ್ಟ್ರೀಯ ಪಕ್ಷಕ್ಕೆ ಅವಮಾನ ಮಾಡಬೇಡಿ, ಈ ಕೂಡಲೇ ಕ್ಷಮೆ ಕೇಳದಿದ್ದರೆ ದಲಿತ, ಮಹಿಳಾ ಸಂಘಟನೆಯನ್ನು ಸೇರಿಸಿ ಪ್ರತಿಭಟನೆ ಮಾಡುತ್ತೇವೆ. ಜೀವಂತ ಇರುವ ವ್ಯಕ್ತಿಗೆ ಶ್ರದ್ಧಾಂಜಲಿ ಹಾಕುವ ಕೀಳು ಮಟ್ಟದ ಯೋಚನೆಗೆ ನಮ್ಮ ದಿಕ್ಕಾರ’ ಎಂದು ಸೂರ್ಯವಂಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles