ನ್ಯೂಸ್ ನಾಟೌಟ್: ಜನವರಿ 11ರಂದು ಸುಳ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿರುವ ಶ್ರೀ ಚೆನ್ನಕೇಶವ ದೇವರ ಪಟ್ಟಣ ಸವಾರಿ ಕಾರ್ಯಕ್ರಮ ನಡೆಯಲಿದೆ. ಕೇರ್ಪಳದ ವಸಂತಕಟ್ಟೆಯಲ್ಲಿ ನಡೆಯಲಿರುವ ಕಟ್ಟೆ ಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿ ಪ್ರಸಾದ ಸ್ವೀಕರಿಸುವಂತೆ ಮನವಿ ಮಾಡಲಾಗಿದೆ. ಸ್ನೇಹ ಸೇತು ಬಳಗ ಕೇರ್ಪಳ ಇವರಿಂದ ಸಂಜೆ ಗಂಟೆ 7:00 ರಿಂದ 8:00ರ ವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8:00 ರಿಂದ 10:00 ವರೆಗೆ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ಹಾಗೂ ಸಿಂಚನ್ಸ್ ಆರ್ಕೆಸ್ಟ್ರ ಸುಳ್ಯ ಇವರಿಂದ ಸಂಗೀತ ರಸಮಂಜರಿ ನಡೆಯಲಿದೆ.













