ನ್ಯೂಸ್ ನಾಟೌಟ್ : ಕಾಂಗ್ರೆಸ್‌ನಲ್ಲಿ ಮತ್ತೆ ಸಿಎಂ ಕುರ್ಚಿ ಗಲಾಟೆ ಶುರುವಾಗಿದೆ. ದೇವರಾಜ್ ಅರಸು ದಾಖಲೆ ಸರಿಗಟ್ಟಿದ ದಿನವೇ ಪೂರ್ಣಾವಧಿ ಸಿಎಂ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
2028ರವರೆಗೂ ಸಿದ್ದರಾಮಯ್ಯ ಸಿಎಂ ಆಗುವ ವಿಶ್ವಾಸ ಇದೆ ಅಂತ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ (Basavaraj Rayareddy) ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸಿ ಪತ್ರ ಬರೆದಿರುವ ರಾಯರೆಡ್ಡಿ, ಪೂರ್ಣಾವಧಿ ಸಿಎಂ ವಿಚಾರ ಪ್ರಸ್ತಾಪ ಮಾಡಿದ್ದಾರೆ. 2028ರ ಮೇ 28ರವರೆಗೂ ಸಿಎಂ ಆಗಿರುವ ವಿಶ್ವಾಸವಿದೆ ಎಂದಿದ್ದು, ಸಿದ್ದರಾಮಯ್ಯ ಸಾಧನೆ ಹೊಗಳಿದ್ದಾರೆ,













