ನ್ಯೂಸ್ ನಾಟೌಟ್: ಕಾಂತಾರ ಚಾಪ್ಟರ್ 1 ಭಾರೀ ನಿರೀಕ್ಷೆ ಮೂಡಿಸಿದೆ. ರಿಷಭ್ ಶೆಟ್ಟಿ ನಿರ್ದೇಶನ ನಟನೆಯ ಸಿನಿಮಾದ ಬಗ್ಗೆ ದೇಶ-ಹೊರದೇಶದಲ್ಲೂ ಸಾಕಷ್ಟು ಮಂದಿಗೆ ಕುತೂಹಲವಿದೆ. ಈಗಾಗಲೇ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು ಜನ ದಾಖಲೆ ಪ್ರಮಾಣದಲ್ಲಿ ವೀಕ್ಷಿಸಿದ್ದಾರೆ.
ಈ ಸಿನಿಮಾದಲ್ಲಿ ಹಲವಾರು ಮಂದಿ ಪ್ರತಿಭೆಗಳು ನಟನೆ ಮಾಡಿದ್ದಾರೆ. ಈ ಪೈಕಿ ಕಾರ್ಕಳದ ಸಮಾಜ ಸೇವಕಿ, ಯಕ್ಷರಂಗಾಯಣ ಕಲಾವಿದೆ ರಮಿತಾ ಶೈಲೇಂದ್ರ ಅವರು ನಟಿಸಿದ್ದಾರೆ. ಅವರು ಕಾಂತಾರದ ಹೀರೋಯಿನ್ ಆಗಿರುವ ರಕ್ಮಿಣಿ ವಸಂತ್ ಅವರ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ.













