37.4 C
Sullia
Sunday, March 8, 2026

‘ಅಮಲು ಏರಿದೆ’ ಹಾಡಿಗೆ ಸಕತ್ ರೆಸ್ಪಾನ್ಸ್! ಯೋಗರಾಜ ಭಟ್ಟರ ಸಾಹಿತ್ಯಕ್ಕೆ ಶರಣ್ ಧ್ವನಿ!

ನ್ಯೂಸ್ ನಾಟೌಟ್ : ಯೋಗರಾಜ್ ಭಟ್ ಹಾಗೂ ಶರಣ್ ಅವರದ್ದು ಹಿಟ್ ಕಾಂಬಿನೇಷನ್. ಈ ಕಾಂಬಿನೇನ್ ಜನಮನ್ನಣೆ ಪಡೆದಿದ್ದು ಹಾಡಿನ ಮೂಲಕ. ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಿಲ್ಲ. ಆದರೆ, ಯೋಗರಾಜ್ ಭಟ್ ಬರೆದ ಲಿರಿಕ್ಸ್​​ಗೆ ಶರಣ್ ಧ್ವನಿಯಾಗಿದ್ದಾರೆ. ಇವರ ಕಾಂಬಿನೇಷನ್​​ನಲ್ಲಿ ಮೂಡಿ ಬಂದ ‘ಎಣ್ಣೆ’ ಹಾಡು ಸಾಕಷ್ಟು ಗಮನ ಸೆಳೆದಿವೆ. ಈಗ ಇವರ ಕಾಂಬಿನೇಷನ್​​ನಲ್ಲಿ ಹೊಸ ವರ್ಷಕ್ಕೆ ‘ಅಮಲು’ ಹಾಡು ರಿಲೀಸ್ ಆಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಯೋಗರಾಜ್ ಭಟ್ ಅವರು ಬರೆದ, ‘ನಾವ್ ಮನೆಗ್ ಹೊಗೋದಿಲ್ಲ’, ‘ಖಾಲಿ ಕ್ವಾಟರ್’ ಹಾಡನ್ನು ಯೋಗರಾಜ್ ಭಟ್ ಬರೆದಿದ್ದಾರೆ. ಇದಕ್ಕೆ ಧ್ವನಿ ಆಗಿದ್ದು ಶರಣ್. ಈ ಹಾಡು ಎಲ್ಲರಿಗೂ ಇಷ್ಟ ಆಗಿದೆ. ಈಗ ಇವರ ಕಾಂಬಿನೇಷನ್ ಅಲ್ಲಿ ‘ಅಮಲು ಏರಿದೆ’ ಹಾಡು ಬಿಡುಗಡೆ ಕಂಡಿದೆ. ‘ಅಮಲು’ ಆಲ್ಬಮ್​ನ ಮೊದಲ ಸಾಂಗ್ ಇದಾಗಿದೆ. ಈ ಹಾಡಿಗೆ ಯೋಗರಾಜ್ ಭಟ್ ಲಿರಿಕ್ಸ್ ಬರೆದಿದ್ದು, ಶರಣ್ ಹಾಡಿದ್ದಾರೆ. ಚೇತನ್ ದ್ಯಾವಿ ಲಿರಿಕ್ಸ್ ಬರೆದಿದ್ದಾರೆ. ಮಹದೇವ್ ಕನಕಪುರ ಅವರು ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ.

ನನಗೆ ದಿನ ರಾತ್ರಿ ಓರ್ವ ಕುಡುಕ ಸಿಗುತ್ತಾ ಇದ್ದ. ನಾನು ಕುಡಿದಿದೀನಿ ಅಂದ್ಕೊಬೇಡಿ ಎಂದು ಹೇಳುತ್ತಿದ್ದ. ಶರಬತ್ತು (ಮದ್ಯ) ಗೀತೆಗಳು ಆ ಕುಡುಕನಿಗೆ ಇಷ್ಟ. ಆ ಕುಡುಕ ನನ್ನ ಹಾಗೂ ಶರಣ್ ಅವರ ದೊಡ್ಡ ಅಭಿಮಾನಿ. ಎಲ್ಲಾ ಕುಡುಕರೂ ತಾವು ಡೀಸೆಂಟ್ ಅಂದುಕೊಳ್ಳುತ್ತಾರೆ. ಆತನ ನೋಡಿ ನನಗೆ ಈ ಹಾಡಿನ ಕಲ್ಪನೆ ಮೂಡಿತು’ ಎಂದಿದ್ದಾರೆ ಯೋಗರಾಜ್ ಭಟ್. ಆರಂಭದಲ್ಲಿ ಈ ಹಾಡಿನಿಂದ ತಪ್ಪಿಸಿಕೊಳ್ಳುವ ಆಲೋಚನೆ ಶರಣ್​​ಗೆ ಇತ್ತು. ಕೊನೆಗೆ ಎಲ್ಲರ ಒತ್ತಾಯಕ್ಕೆ ಹಾಡಿದರು. ಅವರಿಗೆ ಈಗ ಖುಷಿ ಇದೆ.

ಬಾಯಾರಿಕೆಗೆ ಏನೋ ಕಾರಣ’ ಎಂಬ ಹಾಡು ಇದೇ ಆಲ್ಬಂನಲ್ಲಿ ಮೂಡಿ ಬರಲಿದೆಯಂತೆ. ಇದನ್ನು ವಾಸುಕಿ ವೈಭವ್ ಹಾಡಿದ್ದಾರೆ. ಮೂರನೇ ಹಾಡು ಕೂಡ ಇದರಲ್ಲಿ ರಿಲೀಸ್ ಆಗಲಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ಸಿಗಲಿದೆ.

Related Articles

LEAVE A REPLY

Please enter your comment!
Please enter your name here

Latest Articles