ನ್ಯೂಸ್ ನಾಟೌಟ್ : ಚಾಪ್ಟರ್ 1 ಮೂಲಕ ಸದ್ಯದ ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿರುವ ನಟಿ ರುಕ್ಮಿಣಿ ವಸಂತ್. ಇದೀಗ ರುಕ್ಮಿಣಿ ಬಾಲಿವುಡ್ ನಟ ವಿಕ್ಕಿ ಕೌಶಲ್ ಜೊತೆಗೆ ಕಾಣಿಸಿಕೊಂಡಿದ್ದು, ನಟಿ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆಯೇ ಎನ್ನುವ ಗುಸು ಗುಸು ಕೇಳಿ ಬರುತ್ತಿದೆ.
ಹಿಂದೆ ನ್ಯಾಷನಲ್ ಕ್ರಶ್ ಆಗಿದ್ದ ರಶ್ಮಿಕಾ ಮಂದಣ್ಣ ವಿಕ್ಕಿ ಕೌಶಲ್ ಜೊತೆ ಛವಾ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ರುಕ್ಮಿಣಿ ಕೂಡ ರಶ್ಮಿಕಾ ಹಾದಿಯಲ್ಲಿ ನಡೆಯುತ್ತಿದ್ದಾರೆ? ಎನ್ನುವ ಸಂಶಯ ಮೂಡಿದೆ, ಇದಕ್ಕೆ ಕಾರಣ ವಿಕ್ಕಿ ಜೊತೆ ರುಕ್ಮಿಣಿ ಕಾಣಿಸಿಕೊಂಡು, ಕೇಕ್ ತಿನ್ನಿಸುತ್ತಿರುವ ವಿಡಿಯೋವನ್ನು ರುಕ್ಮಿಣಿ ಹಂಚಿಕೊಂಡಿದ್ದು, ಅದು ಸದ್ಯ ವೈರಲ್ ಆಗುತ್ತಿದೆ.













