27.7 C
Sullia
Sunday, March 8, 2026

ಸಂಪಾಜೆಯ ಮಯಾಂಕ್ ಭಾರತೀಯ ನೌಕಾ ದಳಕ್ಕೆ ಆಯ್ಕೆ, ಕೇವಲ 10 ಮಂದಿ ಆಯ್ಕೆಯಾಗಿರುವ ಕಠಿಣ ಪರೀಕ್ಷೆಯಲ್ಲಿ ಗೆದ್ದ ಯುವಕ..!

ನ್ಯೂಸ್ ನಾಟೌಟ್: ಭಾರತೀಯ ನೌಕಾ ದಳಕ್ಕೆ ಸಂಪಾಜೆಯ ಕಳಮೆ ಮಾಯಂಕ್ ಎಸ್ ಆಯ್ಕೆಯಾಗಿದ್ದಾರೆ. ಬಾಲ್ಯದಲ್ಲಿ ಕಂಡಿದ್ದ ಕನಸನ್ನು ಸತತ ಪ್ರಯತ್ನದ ಮೂಲಕ ಸಾಕಾರಗಳಿಸಿಕೊಂಡಿದ್ದಾರೆ. ಮುನ್ನೂರಕ್ಕೂ ಹೆಚ್ಚು ಅಭ್ಯರ್ಥಿಗಳ ಪೈಕಿ ಕೇವಲ 10 ಮಂದಿ ಆಯ್ಕೆಯಾಗಿರುವ ಪರೀಕ್ಷೆಯಲ್ಲಿ ಸಂಪಾಜೆಯ ಮಾಯಂಕ್ ಕೂಡ ಒಬ್ಬರು ಅನ್ನುವುದು ವಿಶೇಷ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಕೇರಳದ ಪ್ರತಿಷ್ಠಿತ ನೌಕಾ ದಳದ ಅಕಾಡೆಮಿಯಲ್ಲಿ ಅಧ್ಯಯನ ನಡೆಸಲಿದ್ದಾರೆ. ಇವರು ನಾಲ್ಕು ವರ್ಷದ ಬಿ ಟೆಕ್ ಪದವಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಕಮೀಷನಡ್ ಆಫೀಸರ್ ಆಗಿ ನೇಮಕಗೊಳ್ಳಲಿದ್ದಾರೆ.

ಇವರು ಕಳಮೆ ಸುಕುಮಾರ, ಮೀರಾ ದಂಪತಿಯ ಪುತ್ರರಾಗಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಬಿಜಿಎಸ್ ವಿದ್ಯಾ ಸಂಸ್ಥೆಯಲ್ಲಿ, ಪ್ರೌಢ ಶಿಕ್ಷಣವನ್ನು ಅಳಿಕೆಯ ಸತ್ಯಸಾಯಿ ಪ್ರೌಢ ಶಾಲೆಯಲ್ಲಿ ಹಾಗೂ ಪಿಯು ಶಿಕ್ಷಣವನ್ನು ಬೆಂಗಳೂರಿನ ದೀಕ್ಷಾ ಪಿಯು ಕಾಲೇಜಿನಲ್ಲಿ ಪೂರೈಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles