21.6 C
Sullia
Sunday, March 8, 2026

ಕುರುಂಜಿ ವೆಂಕಟರಮಣ ಗೌಡರ 97ನೇ ಜಯಂತ್ಯೋತ್ಸವ, ಕೆವಿಜಿ ಪುತ್ಥಳಿಗೆ ಎಒಎಲ್ಇ (ರಿ) ಸುಳ್ಯ ವತಿಯಿಂದ ಪುಷ್ಪ ನಮನ

ನ್ಯೂಸ್ ನಾಟೌಟ್: ಸುಳ್ಯದ ಅಮರ ಶಿಲ್ಪಿ, ಶಿಕ್ಷಣ ಕ್ಷೇತ್ರದ ಹರಿಕಾರ, ಗ್ರಾಮೀಣ ಪ್ರದೇಶದಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ ಅನ್ನದಾತ ದಿವಂಗತ ಕುರುಂಜಿ ವೆಂಕಟರಮಣ ಗೌಡರ 97ನೇ ಜಯಂತ್ಯೋತ್ಸವವನ್ನು ಸುಳ್ಯದ ಕೆವಿಜಿ ಕ್ಯಾಂಪಸ್ ನಲ್ಲಿ ಸಂಭ್ರಮದಿಂದ ಡಿ.26ರಂದು ಆಚರಿಸಲಾಯಿತು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಇದರ ಅಧ್ಯಕ್ಷ ಡಾ.ಕೆ.ವಿ ಚಿದಾನಂದ ಅವರು ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು. ಎಒಎಲ್ಇ ಉಪಾಧ್ಯಕ್ಷೆ ಶೋಭಾ ಚಿದಾನಂದ, ಎಒಎಲ್ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಕಾರ್ಯದರ್ಶಿ ಡಾ. ಐಶ್ವರ್ಯ ಕೆ.ಸಿ, ಕೋಶಾಧಿಕಾರಿ ಡಾ. ಗೌತಮ್ ಗೌಡ, ಕಾರ್ಯದರ್ಶಿ ಹೇಮನಾಥ ಕೆ.ವಿ, ಜಗದೀಶ್ ಅಡ್ತಲೆ, ಕೆ.ವಿ.ಜಿ. ಸಂಸ್ಥಾಪಕರ ದಿನಾಚರಣೆ ಅಧ್ಯಕ್ಷ ಡಾ. ಡಿ.ವಿ. ಲೀಲಾಧರ್, ಕೆ.ವಿ.ಜಿ. ಸುಳ್ಯ ಉತ್ಸವ ಸಮಿತಿ ಅಧ್ಯಕ್ಷ ಡಾ.ಕೆ.ಟಿ. ವಿಶ್ವನಾಥ್, ಸುಳ್ಯ ನ.ಪಂ. ಮಾಜಿ ಅಧ್ಯಕ್ಷ ವಿನಯ್ ಕಂದಡ್ಕ, ಎಂ.ವೆಂಕಪ್ಪ ಗೌಡ, ಮೀನಾಕ್ಷಿ ಹೇಮನಾಥ ಕುರುಂಜಿ, ವೈದ್ಯಕೀಯ ಕಾಲೇಜು ಮಾಜಿ ಪ್ರಾಂಶುಪಾಲೆ ಶೀಲಾ ಜಿ.ನಾಯಕ್, ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಹಾಗೂ ನರ್ಸಿಂಗ್ ಸೈನ್ಸಸ್ ಪ್ರಾಂಶುಪಾಲರು ಡಾ ಪ್ರಮೋದ್ ಕೆ. ಜಿ ಚಂದ್ರಾವತಿ, ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರು ಡಾ.ಎಂ.ಎಂ. ರುದ್ರಕುಮಾರ್, ಎನ್‌ಎಂಪಿಯುಸಿ ಪ್ರಾಂಶುಪಾಲರು ಮಿಥಾಲಿ ಪಿ ರೈ, ಮೆಡಿಕಲ್ ಡೀನ್ ಡಾ. ನೀಲಾಂಬಿಕೈ ನಟರಾಜನ್,ಡಾ.ಎನ್.ಎ. ಜ್ಞಾನೇಶ್, ಪ್ರೊ. ಕೆ.ವಿ.ದಾಮೋದರ ಗೌಡ, ಡಾ.ಸಂದೇಶ್, ಎನ್ನೆಂಸಿ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ಸೇರಿದಂತೆ ಕೆ.ವಿ.ಜಿ. ವಿದ್ಯಾಸಂಸ್ಥೆಯ ಸಿಬ್ಬಂದಿಗಳು, ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ರೋಟರಿ, ಲಯನ್ಸ್, ಜೇಸಿಐ ಸುಳ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Latest Articles